ಮುಂಬೈ: ಘಾಟ್ಕೋಪರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸುಬೋಧ್ ಸಾವೋಜಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತಂತೆ ವರದಿಯಾಗಿದ್ದು, ನೀವು ಪ್ರೀತಿಸುವ ಹುಡುಗಿಯನ್ನು ಅಪಹರಿಸಿ ತಂದು ಮದುವೆ ಮಾಡಿಸುತ್ತೇನೆ ಎಂಬ ಅಪ್ರಬುದ್ಧ, ಅಸಂಬದ್ಧ ಹೇಳಿಕೆ ನೀಡಿರುವ ರಾಮ್ ಕದಮ್ ಶಾಸಕರಾಗಲು ಲಾಯಕ್ಕಿಲ್ಲ. ಆದ್ದರಿಂದ ಅವರ ನಾಲಿಗೆ ಕತ್ತರಿಸಿದವರಿಗೆ ನಾನು 5 ಲಕ್ಷ ರೂ. ಬಹುಮಾನ ಘೋಷಿಸುತ್ತೇನೆ ಎಂದು ಮಹಾರಾಷ್ಟ್ರದ ಮಾಜಿ ಸಚಿವ ಸುಬೋಧ್ ಹೇಳಿದ್ದಾರೆ.
#WATCH: Former Maharashtra minister and Congress leader Subodh Savji says ‘I am announcing a Rs 5-lakh reward for anyone who chops off BJP MLA Ram Kadam’s tongue. I strongly condemn him saying girls should be abducted.' (06.09.18) pic.twitter.com/Y3h8AR7Vd1
— ANI (@ANI) September 7, 2018
ಇಂತಹ ಹೇಳಿಕೆ ನೀಡುವ ಮೂಲಕ ರಾಮ್ ಕದಮ್ ಮಹಾರಾಷ್ಟ್ರ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದವರು ಹೇಳಿದ್ದಾರೆ.
Discussion about this post