ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ #Congress ಕಾರ್ಯಕರ್ತರು ಅಂಗಿ ಬಿಚ್ಚಿ ಅರೆನಗ್ನ ಸ್ಥಿತಿಯಲ್ಲಿ ಅಸಭ್ಯವಾಗಿ ಪ್ರತಿಭಟಿಸಿದ ಘಟನೆ ನಡೆದಿದೆ.
ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ #AISummit ಒಳಗೆ ತೆರಳಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ವೇದಿಕೆ ಏರಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು.
ಶೃಂಗಸಭೆಯ ವೀಕ್ಷಣೆಗೆಂದು ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಭಾಂಗಣ ಪ್ರವೇಶಿಸಿದ ಬಳಿಕ ತಮ್ಮ ಶರ್ಟ್ ತೆಗೆದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಮೆರಿಕದ ವಿರುದ್ಧ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯರ್ತರು ಎಂದು ಹೇಳಿಕೊಂಡ ಒಂದು ಗುಂಪು #QRCode ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಾರತ್ ಮಂಟಪದೊಳಗೆ ಪ್ರವೇಶಿಸಿದ್ದಾರೆ. ಅವರು ಸ್ವೆಟರ್ ಮತ್ತು ಜಾಕೆಟ್ ಹಾಕಿಕೊಂಡಿದ್ದರಿಂದ ಸೆಕ್ಯುರಿಟಿಗಳಿಗೆ ಅವರ ಶರ್ಟ್ ಮೇಲಿದ್ದ ಮೋದಿ ಹಾಗೂ ಟ್ರಂಪ್ ಫೋಟೋ, ಘೋಷಣೆ ಕಾಣಿಸಿರಲಿಲ್ಲ ಎಂದು ವರದಿಯಾಗಿದೆ.
ಒಳಗೆ ಬಂದ ನಂತರ ಅವರು ತಮ್ಮ ಜಾಕೆಟ್ ಬಿಚ್ಚಿ ಅಂಗಿಯನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗತೊಡಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಎಲ್ಲರನ್ನೂ ಸಹ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















