ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಣೆ ಮಾಡಿದ್ದು, ಇದರಿಂದಾಗಿ ದಿನನಿತ್ಯದ ಸಂಪಾದನೆಯಿಲ್ಲದೇ ಹಲವು ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರಿಗೆ ಸಹಾಯಹಸ್ತ ಚಾಚಲು ಮಹಾನಗರ ಪಾಲಿಕೆ ಮುಂದಾಗಿದ್ದು, ನೀವೂ ಸಹ ಕೈಜೋಡಿಸಬಹುದಾಗಿದೆ.
ದಿನನಿತ್ಯದ ಸಂಪಾದನೆ ಇಲ್ಲದೇ ತೊಂದರೆಗೆ ಒಳಗಾಗಿರುವ ಕಾರ್ಮಿಕ ವರ್ಗ ಹಾಗೂ ಅವರ ಕುಟುಂಬ ಮತ್ತು ಸಂತ್ರಸ್ಥರಿಗೆ ಸಹಾಯ ಮಾಡುವ ಸಲುವಾಗಿ ದಾನಿಗಳಿಂದ ಆಹಾರ ಸಾಮಗ್ರಿಗಳ ಸ್ವೀಕೃತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ದಾನಿಗಳು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆ, ಟೀ ಪೌಡರ್, ಸಕ್ಕರೆ, ಗೋಧಿ, ಜೋಳ, ಬೆಲ್ಲ, ರಾಗಿ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ದಾನ ರೂಪದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತಯ್ಯ-8073659642 ಹಾಗೂ ಸ್ಟೋರ್ ವಿಭಾಗದ ಎನ್.ಎಂ. ಸುನೀಲ್-9448525350ಗೆ ಸಂಪರ್ಕಿಸಬಹುದಾಗಿದೆ.
Get in Touch With Us info@kalpa.news Whatsapp: 9481252093
Discussion about this post