ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಕ್ರಮ ಕೈಗೊಂಡಿದ್ದು, ಶಿವಮೊಗ್ಗ-ಯಶವಂತಪುರ ನಡುವೆ ಸಂಚರಿಸುತ್ತಿದ್ದ ತತ್ಕಾಲ್ ಎಕ್ಸ್’ಪ್ರೆಸ್, ಶಿವಮೊಗ್ಗ-ಚೆನ್ನೈ ನಡುವಿನ ಎಕ್ಸ್’ಪ್ರೆಸ್, ಶಿವಮೊಗ್ಗ-ರೇಣಿಗುಂಟ(ತಿರುಪತಿ) ನಡುವಿನ ಎಕ್ಸ್’ಪ್ರೆಸ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಮಾರ್ಚ್ 22ರ ನಾಳೆಯಿಂದ ಮಾರ್ಚ್ 31ರವರೆಗೂ ಈ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಈ ರೈಲುಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಐಆರ್’ಸಿಟಿಸಿ ವೆಬ್’ವೈಟ್’ನಲ್ಲೂ ಸಹ ರೈಲು ರದ್ದಾಗಿದೆ ಎಂದು ಸಂದೇಶ ತೋರಿಸುತ್ತಿದೆ.
ಇನ್ನು, ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ನಡುವಿನ ಜನಶತಾಬ್ದಿ ರೈಲು ಸಂಚಾರವನ್ನೂ ಸಹ ಇದೇ ಅವಧಿಗೆ ರದ್ದು ಮಾಡಲಾಗಿದ್ದು, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್’ಪ್ರೆಸ್, ಸಾಯಿನಗರ ಶಿರಡಿ-ಮೈಸೂರು ವೀಕ್ಲೀ ಎಕ್ಸ್’ಪ್ರೆಸ್, ಯಶವಂತ್ ರ್ಪು-ಪಂಡರಾಪುರ ಎಕ್ಸ್’ಪ್ರೆಸ್, ಮೈಸೂರು-ಯಲಹಂಕ ಮಾಲ್ಗುಡಿ ಎಕ್ಸ್’ಪ್ರೆಸ್, ಬೆಂಗಳೂರು-ಮೈಸೂರು ರಾಜರಾಣಿ ಎಕ್ಸ್’ಪ್ರೆಸ್, ಮೈಸೂರು-ರೇಣಿಗುಂಟ ವೀಕ್ಲೀ ಎಕ್ಸ್’ಪ್ರೆಸ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
Get in Touch With Us info@kalpa.news Whatsapp: 9481252093
Discussion about this post