ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯಲ್ಲಿ ಥರ್ಮೋಸ್ಕ್ರೀನಿಂಗ್ ನಡೆಸಲಾಗುತ್ತಿದೆ.
ಇಲ್ಲಿನ ನ್ಯಾಯಾಲಯದಲ್ಲಿ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಥರ್ಮೋಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಶುಕ್ರವಾರವೂ ಮುಂದುವರೆಸಿದೆ.
ಅದರ ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಗರದ ನ್ಯಾಯಾಲಯದ ಒಳಾವರಣದಲ್ಲಿ ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ಗಾಯತ್ರಿ ಹಾಗೂ ಸಿಬ್ಬಂದಿಗಳಾದ ನೀಲೇಶ್ ರಾಜ್ ಅವರ ತಂಡ ನ್ಯಾಯಾಧೀಶರನ್ನು, ನ್ಯಾಯಾಲಯದ ಸಿಬ್ಬಂದಿಗಳನ್ನು ಮತ್ತು ವಕೀಲರನ್ನು ಹಾಗೂ ವಿರಳ ಸಂಖ್ಯೆಯಲ್ಲಿ ಹಾಜರಿದ್ದ ಕಕ್ಷೀದಾರರನ್ನು ಥರ್ಮೋಮೀಟರ್ ಮೂಲಕ ಅವರುಗಳ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿದರು.
ನಾಲ್ಕನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ, ವಿವಿಧ ಶ್ರೇಣಿಯ ನ್ಯಾಯಾಲಯಗಳ ನ್ಯಾಯಾಧೀಶರುಗಳಾದ ಪ್ರಭಾಕರ್, ರೂಪಾಶ್ರೀ, ಗಣೇಶ್ ಪಡಿಯಾರ್, ಪುರುಷೋತ್ತಮ್, ಚಂದ್ರಶೇಖರ ಬಣಕಾರ್, ಮೋಹನ್ ಗೌಡ, ಸ್ನೇಹ ಅವರುಗಳನ್ನು ಅವರ ಚೇಂಬರ್’ಗಳಲ್ಲಿಯೇ ಪರೀಕ್ಷಿಸಲಾಯಿತು. ಉಳಿದಂತೆ ಎಲ್ಲರನ್ನು ನ್ಯಾಯಾಲಯದ ಪ್ರವೇಶದ್ವಾರದ ಒಳಾವರಣದಲ್ಲಿ ತಪಾಸಣೆ ಗೊಳಪಡಿಸಲಾಯಿತು.
ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಉಪಾಧ್ಯಕ್ಷ ವೈ. ಜಯರಾಂ, ಕಾರ್ಯದರ್ಶಿ ರಾಜು, ಸಹಕಾರ್ಯದರ್ಶಿ ಮೋಹನ್, ಖಜಾಂಚಿ ರಂಗಪ್ಪ ಸೇರಿದಂತೆ ಅನೇಕ ವಕೀಲರು ಹಾಜರಿದ್ದರು.
Get in Touch With Us info@kalpa.news Whatsapp: 9481252093
Discussion about this post