ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದ 27 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ಮೀರಿ ಮುನ್ನುಗ್ಗುತ್ತಿದೆ. ಆಗಸ್ಟ್ ಆರಂಭದ ದಿನ 5172 ಕೇಸ್ ಪತ್ತೆಯಾಗುವ ಮೂಲಕ ಈವರೆಗೆ 1,29,287 ಜನರಿಗೆ ಸೋಂಕು ಹಬ್ಬಿ ಇಂದು ಮೃತಪಟ್ಟ 98 ಜನ ಸೇರಿದಂತೆ ಒಟ್ಟು 2412 ಮಂದಿ ಬಲಿಯಾಗಿದ್ದಾರೆ.
ಶನಿವಾರ 3860 ಮಂದಿ ಡಿಸ್ಚಾರ್ಜ್ ಹೊಂದಿದ್ದು ಈವರೆಗೆ 53,648 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ತೀವ್ರ ನಿಗಾ ಘಟಕದಲ್ಲಿರುವ 602 ಮಂದಿ ಸೇರಿದಂತೆ ಉಳಿದ 73,219 ಸಕ್ರಿಯ ಪ್ರಕರಣಗಳಿಗೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಂಬರ್ 1 ಸ್ಥಾನದಲ್ಲಿರುವ ಬೆಂಗಳೂರು ನಗರದಲ್ಲಿ ಇಂದು 1852 ಜನರಿಗೆ ಸೋಂಕು ತಾಗಿ 27 ಮಂದಿ ಮೃತಪಟ್ಟಿದ್ದಾರೆ. ಶನಿವಾರ ಬಿಡುಗಡೆಗೊಂಡ 1683 ಮಂದಿ ಸೇರಿದಂತೆ ಈವರೆಗೆ 18579 ಜನ ಡಿಸ್ಚಾರ್ಜ್ ಹೊಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ 1056 ಜನ ಈ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದ 37,760 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ವಿವಿದೆಡೆ ಚಿಕಿತ್ಸೆ ನೀಡಲಾಗುತ್ತಿದೆ.
10 ದಿನಗಳಲ್ಲಿ ಹೆಚ್ಚಿದ ಸೋಂಕು, ಸಾವು;
ಕಳೆದ 10 ದಿನದಲ್ಲಿ ರಾಜ್ಯಾದ್ಯಂತ 53,454 ಜನರಿಗೆ ಸೋಂಕು ತಾಗಿ 895 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 10 ದಿನದ ಅವಧಿಯಲ್ಲಿ 20,403 ಜನರಿಗೆ ಸೋಂಕು ಹಬ್ಬಿ 321 ಜನರನ್ನು ಬಲಿ ಪಡೆದಿದೆ.
ಜಿಲ್ಲಾವಾರು ಸೋಂಕು, ಸಾವು;
ಬಳ್ಳಾರಿ ಜಿಲ್ಲೆಯಲ್ಲಿ ಇಂದು 269 ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 6672 ತಲುಪಿ 75 ಜನರನ್ನು ಬಲಿ ಪಡೆದಿದೆ. ದಕ್ಷಿಣ ಕನ್ನಡ ಇಂದು 139 ಕೇಸ್ (ಒಟ್ಟು 5847 ಪ್ರಕರಣ, 148 ಸಾವು), ಕಲಬುರ್ಗಿ 219 (5529 ಪ್ರ, 100 ಸಾ), ಮೈಸೂರು 365 (4582 ಪ್ರ, 51 ಸಾ), ಉಡುಪಿ 136 (4491 ಪ್ರ, 35 ಸಾ), ಧಾರವಾಡ 184 (4275 ಪ್ರ, 139 ಸಾ), ಬೆಳಗಾವಿ 219 (3449 ಪ್ರ, 74 ಸಾ), ವಿಜಯಪುರ 129 (3019 ಪ್ರ, 35 ಸಾ), ಯಾದಗಿರಿ 39 (2386 ಪ್ರ, 07 ಸಾ), ರಾಯಚೂರು 109 (2382 ಪ್ರ, 25 ಸಾ), ಬೆಂಗಳೂರು ಗ್ರಾಮಾಂತರ 93 (2349 ಪ್ರ, 10 ಸಾ), ಹಾಸನ 146 (2281 ಪ್ರ, 61 ಸಾ), ಬೀದರ್ 52 (2263 ಪ್ರ, 79 ಸಾ), ದಾವಣಗೆರೆ 108 (2209 ಪ್ರ, 52 ಸಾ), ಉತ್ತರ ಕನ್ನಡ 51 (2163 ಪ್ರ, 74 ಸಾ), ಶಿವಮೊಗ್ಗ 119 (1842 ಪ್ರ, 31 ಸಾ), ಚಿಕ್ಕಬಳ್ಳಾಪುರ 72 (1840 ಪ್ರ, 35 ಸಾ), ಬಾಗಲಕೋಟೆ 134 (1813 ಪ್ರ, 47 ಸಾ), ತುಮಕೂರು 99 (1707 ಪ್ರ 52 ಸಾ), ಮಂಡ್ಯ 95 (1660 ಪ್ರ, 11 ಸಾ), ಗದಗ 99 (1480 ಪ್ರ, 34 ಸಾ), ಕೋಲಾರ 107 (1364 ಪ್ರ, 25 ಸಾ), ಕೊಪ್ಪಳ 107 (1185 ಪ್ರ, 21 ಸಾ), ರಾಮನಗರ 51 (1099 ಪ್ರ, 11 ಸಾ), ಚಿಕ್ಕಮಗಳೂರು 57 (1050 ಪ್ರ, 21 ಸಾ), ಹಾವೇರಿ 52 (1043 ಪ್ರ, 25 ಸಾ), ಚಿತ್ರದುರ್ಗ 60 (712 ಪ್ರ, 09 ಸಾ), ಚಾಮರಾಜನಗರ 43 (712 ಪ್ರ, 07 ಸಾ), ಕೊಡಗು 35 (451 ಪ್ರ, 09 ಸಾ), ಇತರೆ 0 (36 ಪ್ರ, 03 ಸಾವು) ಸೇರಿದಂತೆ ಈವರೆಗೆ ರಾಜ್ಯದಲ್ಲಿ 1,29,287 ಜನರಿಗೆ ಸೋಂಕು ಹಬ್ಬಿ 2412 ಮಂದಿ ಬಲಿಯಾಗಿದ್ದಾರೆ.
ಸಾವಿರ ಮೀರಿದ ಜಿಲ್ಲೆಗಳು;
57 ಸಾವಿರ ಕೇಸ್ ಮೀರಿದ ಜಿಲ್ಲೆ 01; ಆರು ಸಾವಿರ ಮೀರಿದ ಜಿಲ್ಲೆ 01; ಐದು ಸಾವಿರ ಮೀರಿದ ಜಿಲ್ಲೆ 02; ನಾಲ್ಕು ಸಾವಿರ ಮೀರಿದ ಜಿಲ್ಲೆ 03; ಮೂರು ಸಾವಿರ ಮೀರಿದ ಜಿಲ್ಲೆ 02; ಎರಡು ಸಾವಿರ ಮೀರಿದ ಜಿಲ್ಲೆಗಳ ಸಂಖ್ಯೆ 07; ಹಾಗೂ 11 ಜಿಲ್ಲೆಗಳಲ್ಲಿ 1 ಸಾವಿರ ಮೀರಿ ಸೋಂಕು ವ್ಯಾಪಿಸಿದೆ. ಉಳಿದ 2 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 7 ಶತಕ ದಾಟಿದ್ದರೆ, 1 ಜಿಲ್ಲೆಯಲ್ಲಿ ನಾಲ್ಕುವರೆ ಶತಕ ಮೀರಿ ಭಯ ಹುಟ್ಟಿಸಿದೆ.
ದೇಶದಾದ್ಯಂತ ಕಳೆದ 24 ಹಣತೆಯ ಅವಧಿಯಲ್ಲಿ 57,117 ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 16,95,988 ತಲುಪಿದ್ದು 10,94,374 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 36,511 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಶ್ವದಾದ್ಯಂತ ಕಳೆದ 24 ಗಂಟೆಯ ಅವಧಿಯಲ್ಲಿ 2,89,149 ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1 ಕೋಟಿ, 77 ಲಕ್ಷದ, 52 ಸಾವಿರದ, 708 ತಲುಪಿದೆ. 1 ಕೋಟಿ, 09 ಲಕ್ಷದ, 49 ಸಾವಿರದ, 259 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈವರೆಗೆ 6 ಲಕ್ಷದ, 82 ಸಾವಿರದ, 393 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಚ್ಚರಿಕೆ; ಆದ್ದರಿಂದ ಜನತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಆರೋಗ್ಯದ ಜೊತೆಗೆ ಅಕ್ಕಪಕ್ಕದವರ ಆರೋಗ್ಯ ಸುರಕ್ಷತೆಯ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post