ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಮ್ಮ ನಿವಾಸದಲ್ಲಿದ್ದ ಸಂಬಂಧಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಕುಟುಂಬಸ್ಥರು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಸಚಿವರು, ನನ್ನ ಮನೆಯ ಸಂಪರ್ಕದಲ್ಲಿದ್ದ ನನ್ನ ದೂರದ ಸಂಬಂಧಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ನಾನು ಹಾಗೂ ನನ್ನ ಕುಟುಂಬದವರು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದೆವು. ಇದೀಗ ಬಂದ ಪರೀಕ್ಷಾ ವರದಿಯಲ್ಲಿ ನನಗೂ ಹಾಗೂ ನಮ್ಮ ಕುಟುಂಬದವರಿಗೂ ಕೊರೋನಾ ಸೋಂಕಿಲ್ಲವೆಂದು ದೃಢ ಪಟ್ಟಿರುವುದು ಸಮಾಧಾನದ ವಿಷಯ ಎಂದಿದ್ದಾರೆ.
ನನ್ನ ಮನೆಯ ಸಂಪರ್ಕದಲ್ಲಿದ್ದ ನನ್ನ ದೂರದ ಸಂಬಂಧಿ ಓರ್ವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ನಾನು ಹಾಗು ನನ್ನ ಕುಟುಂಬದವರು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದೆವು. ಇದೀಗ ಬಂದ ಪರೀಕ್ಷಾ ವರದಿಯಲ್ಲಿ ನನಗೂ ಹಾಗೂ ನಮ್ಮ ಕುಟುಂಬದವರಿಗೂ ಕೊರೊನಾ ಸೋಂಕಿಲ್ಲವೆಂದು ಧೃಡ ಪಟ್ಟಿರುವುದು ಸಮಾಧಾನದ ವಿಷಯ.
— K S Eshwarappa (@ikseshwarappa) July 14, 2020
Get In Touch With Us info@kalpa.news Whatsapp: 9481252093
















