ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಆಗಸ್ಟ್ 5ರಂದು ರಾಮ ಮಂದಿರ ಶಿಲಾನ್ಯಾಸದ ದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ ದಾಸ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಅಂದು, ವೇದಿಕೆಗೆ ಆಗಮಿಸಿದ ಆರಂಭದಲ್ಲೇ ನೃತ್ಯ ಗೋಪಾಲ್ ದಾಸ್ ಅವರ ಕೈ ಹಿಡಿದ, ಶಿರಬಾಗಿ ನಮಿಸಿದ್ದರು. ಹೀಗಾಗಿ, ಕೊಂಚ ಆತಂಕ ಮನೆ ಮಾಡಿದೆ.

ಆದರೆ, ಕಾರ್ಯಕ್ರಮ ನಡೆದಿದ್ದು ಆಗಸ್ಟ್ 5ರಂದು. ಗೋಪಾಲ ದಾಸ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ನಿನ್ನೆ. ಕೊರೋನಾ ಪಾಸಿಟಿವ್ ದೃಢಪಟ್ಟಿರುವುದು ಇಂದು. ಹೀಗಾಗಿ, ಮೋದಿಯವರ ಕುರಿತಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ವರದಿಯಾಗಿದೆ.
Get In Touch With Us info@kalpa.news Whatsapp: 9481252093
















