ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭಾರೀ ನಿರೀಕ್ಷೆ ಮೂಡಿಸಿರುವ ಕೊರೋನಾ ಲಸಿಕೆಯನ್ನು ಬಿಗಿ ಭದ್ರತೆಯಲ್ಲಿ ಇಂದು ನಗರಕ್ಕೆ ತರಲಾಗಿದ್ದು, ಅಧಿಕಾರಿಗಳು ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡಿದ್ದಾರೆ.ಚಿತ್ರದುರ್ಗದಲ್ಲಿರುವ ಪ್ರಾದೇಶಿಕ ಉಗ್ರಾಣದಿಂದ ಭಾರೀ ಪೊಲೀಸ್ ಬಿಗಿ ಭದ್ರತೆಯಲ್ಲಿ ಲಸಿಕೆಯನ್ನು ಶಿವಮೊಗ್ಗಕ್ಕೆ ಇಂದು ಮುಂಜಾನೆ ತರಲಾಗಿದೆ. ಲಸಿಕೆ ಹಾಗೂ ಸಿರಿಂಜ್’ಗಳು ಉಳ್ಳ ಬಾಕ್ಸ್’ಗಳನ್ನು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಪಂ ಸಿಇಒ ವೈಶಾಲಿ, ಡಿಎಚ್’ಒ ರಾಜೇಶ್ ಸುರಗೀಹಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಲಸಿಕೆಗಳುಳ್ಳ ಬಾಕ್ಸ್’ಗಳನ್ನು ಕೂಲರ್’ನಲ್ಲಿ ಸ್ಟೋರ್ ಮಾಡಲಾಯಿತು.
ನಾಳೆಯಿಂದ ಲಸಿಕೆ ವಿತರಣೆ ಆರಂಭ
ಇನ್ನು, ಜ.16ರ ನಾಳೆಯಿಂದ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ, ಸಾಗರ ಹಾಗೂ ಸೊರಬಗಳಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ. ಜ.18ರಿಂದ ಜಿಲ್ಲೆಯಾದ್ಯಂತ 91 ಕೇಂದ್ರಗಳಲ್ಲಿ ಪ್ರತಿ ಬೂತ್’ನಲ್ಲೂ 100 ಜನರಿಗೆ ಲಸಿಕೆ ವಿತರಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post