ಉಡುಪಿ: ಶ್ರೀಮಧ್ವ ಪರಂಪರೆಯ ಫಲಿಮಾರು ಮಠದ 32ನೆಯ ಉತ್ತರಾಧಿಕಾರಿಯಾಗಿ ನೇಮಕಗೊಂಡು ಆಶ್ರಮ ದೀಕ್ಷೆ ಸ್ವೀಕರಿಸಿದ ಕಿರಿಯ ಯತಿಗಳಿಗೆ ಶ್ರೀವಿದ್ಯಾ ರಾಜೇಶ್ವರ ತೀರ್ಥರು ಎಂದು ನಾಮಕರಣ ಮಾಡಲಾಗಿದೆ.
ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಹಿರಿಯ ಶ್ರೀಗಳಾದ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು, ಕಿರಿಯ ಶ್ರೀಗಳಿಗೆ ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಶೇಕ ನಡೆಸಿ, ಆಶ್ರಮ ನಾಮವನ್ನಿತ್ತರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಉಭಯ ಶ್ರೀಗಳು, ಪುತ್ತಿಗೆ ಮಠದ ಶ್ರೀಗಳು ಹಾಗೂ ಕೃಷ್ಣಾಪುರ ಮಠದ ಶ್ರೀಗಳು ಉಪಸ್ಥಿತರಿದ್ದರು.
ಪಟ್ಟಾಭಿಶೇಕದ ಫೋಟೋ ಗ್ಯಾಲರಿ ನೋಡಿ:
Discussion about this post