ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಬೆಂಗಳೂರು ಹಾಗೂ ಹಂಪಿಯನ್ನು #Hampi ಸಂಪರ್ಕಿಸುವ ದೈನಂದಿನ ವಿಮಾನ ಸೇವೆಯನ್ನು ಸ್ಟಾರ್ ಏರ್ #StarAir ಸಂಸ್ಥೆ ನವೆಂಬರ್ 1ರಿಂದ ಪ್ರಾರಂಭಿಸುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಈ ಹೊಸ ಪ್ರಯಾಣಿಕ ಸೇವೆಯಿಂದ ಯುನೆಸ್ಕೋ #UNESCO ವಿಶ್ವ ಪರಂಪರೆಯ ತಾಣವಾದ ಹಂಪಿ ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಹೊಸ ಚೈತನ್ಯ ಸಿಗಲಿದೆ.
ಐತಿಹಾಸಿಕ ಪಟ್ಟಣ ಹಂಪಿಗೆ ಹತ್ತಿರದ ವಿದ್ಯಾನಗರ ವಿಮಾನ ನಿಲ್ದಾಣದಿಂದ ಈ ವಿಮಾನಗಳು ಸಂಚರಿಸಲಿವೆ. ಕಳೆದ ಒಂದು ತಿಂಗಳಿಂದ ಈ ವಿಮಾನ ನಿಲ್ದಾಣದಲ್ಲಿ ಸೇವೆ ಸ್ಥಗಿತಗೊಂಡಿದ್ದರಿಂದ ಸ್ಥಳೀಯರು ಮತ್ತು ಪ್ರಯಾಣಿಕರಲ್ಲಿ ಹೊಸ ಘೋಷಣೆಯು ನಿರಾಳತೆ ಮೂಡಿಸಿದೆ.

ಈ ಸೇವೆ ಆರಂಭಗೊಂಡರೆ ಹಂಪಿಗೆ ನೇರ ಸಂಪರ್ಕ ಸುಲಭವಾಗಲಿದೆ. ಪ್ರಸ್ತುತ, ಪ್ರವಾಸಿಗರು ಹುಬ್ಬಳ್ಳಿ ವಿಮಾನ ನಿಲ್ದಾಣ (ಸುಮಾರು 150 ಕಿಮೀ ದೂರ) ಬಳಸಬೇಕಾಗುತ್ತದೆ. ಆದರೆ ವಿದ್ಯಾನಗರ ವಿಮಾನ ನಿಲ್ದಾಣ ಹಂಪಿಯಿAದ ಕೇವಲ 35 ಕಿಮೀ ದೂರದಲ್ಲಿರುವುದರಿಂದ ಪ್ರವಾಸಿಗರಿಗೆ ಇದು ಬಹು ಸುಲಭ ಮಾರ್ಗವಾಗಲಿದೆ.
ಈ ಕ್ರಮಕ್ಕೆ ಸಾರ್ವಜನಿಕರು ಈ ಘೋಷಣೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
(ವರದಿ: ಮುರುಳೀಧರ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post