ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ವಿಲನ್ ಚಿತ್ರ ಯಶಸ್ಸು ಕಾಣಲಿ ಎಂದು ಉತ್ತರ ಕರ್ನಾಟಕದ ನಗರವೊಂದರಲ್ಲಿ ಅಭಿಮಾನಿಗಳು ಕೋಣ ಕಡಿದು, ಅದರ ರಕ್ತದಿಂದ ಚಿತ್ರದ ಪೋಸ್ಟರ್‌ಗೆ ಅಭಿಷೇಕ ಮಾಡಿದ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಕೃತ್ಯ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಸುದ್ದಿಯಾಗಿದ್ದು, ಇಂತಹ ಅಮಾನವೀಯ ಹಾಗೂ ವಿಕೃತ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾರೀ ನಿರೀಕ್ಷೆ ಮೂಡಿಸಿದ್ದ ವಿಲನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ಕಿಚ್ಚ ಸುದೀಪ್ ಹೊಡೆದಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಹೆಚ್ಚಿನ ಮಹತ್ವ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಹಿಂದೆಯೇ ಪ್ರತಿಭಟನೆಗಳು ನಡೆದ ಕಾರಣ ದಿ ವಿಲನ್ ಸಿನಿಮಾ ನೋಡುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಯಿತು. ಈ ಕಾರಣಕ್ಕಾಗಿ ಅಭಿಮಾನಿಗಳು ಮೂಕ ಪ್ರಾಣಿಗಳನ್ನು ಬಲಿ ಕೊಟ್ಟು ದಿ ವಿಲನ್ ಸಿನಿಮಾ ಯಶಸ್ಸು ಕಾಣಲಿ ಎಂದು ಹರಕೆ ಹೊತ್ತರು. ಉತ್ತರ ಕರ್ನಾಟಕದಲ್ಲಿ ಅಭಿಮಾನಿಗಳು ಥಿಯೇಟರ್ ಬಳಿ ಕೋಣ ಕಡಿದು ಅಮಾನವೀಯವಾಗಿ ವರ್ತಿಸಿದ್ದರು. ಅಲ್ಲದೇ ಕುರಿ ಕಡಿದು ಅದರ ರಕ್ತದಲ್ಲಿ ಸುದೀಪ್ ಕಟೌಟ್ ಗೆ ರಕ್ತಾಭೀಷೇಕ ಮಾಡಿದ್ದರು.
ಇಂತಹ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಂತಹ ಅಮಾನವೀಯ ನಡೆಗೆ ಕಿಡಿ ಕಾರಿದ್ದಾರೆ.
ಇನ್ನು, ಕಂಬಳದಂತಹ ಸಂಪ್ರದಾಯಗಳಿಗೆ ವಿರೋಧ ವ್ಯಕ್ತಪಡಿಸುವ ಪೇಟಾ ಸಂಸ್ಥೆ ಇಂತಹ ಕೃತ್ಯಗಳ ವಿಚಾರದಲ್ಲಿ ಮಾತನಾಡದೇ ಮೌನವಾಗಿರುವುದು ಅವರ ಅವಕಾಶವಾದಿತ್ವವನ್ನು ತೋರುತ್ತದೆ.
ಸುದೀಪ್ ಕಿಡಿ
ಇನ್ನು, ಕೋಣ ಕಡಿದ ಕೃತ್ಯಕ್ಕೆ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Brutality is inhuman …. it’s my sincere request to stop all this .. this isn’t the luv or respect The team of villain would wanna see…. stop this slaughtering act please.
— Kichcha Sudeepa (@KicchaSudeep) October 20, 2018
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕ್ರೂರತನ ಅಮಾನವೀಯವಾದುದ್ದು. ಇದನ್ನು ಇಲ್ಲಗೇ ನಿಲ್ಲಿಸಿಬಿಡಿ. ಈ ರೀತಿಯ ಅಭಿಮಾನವನ್ನು ವಿಲನ್ ಚಿತ್ರ ತಂಡ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರಿಸಿದ್ದಾರೆ.
Discussion about this post