ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಕತ್ತಲೆಹೊಳೆಯಲ್ಲಿ ಕೆಲವು ದಿನಗಳ ಹಿಂದೆ ಸದಿಯಮ್ಮ, ಪಾರ್ವತಿ ಎಂಬುವವರ 5 ಗೋವುಗಳ ಕಳವಾಗಿದ ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಕೊಟ್ಟಿಗೆಗೆ ನುಗ್ಗಿ ದನವನ್ನು ಕಳವು ಮಾಡಲಾಗಿದೆ. ನಾಳೆ ಮತ್ತೇನೂ ಮಾಡ್ತಾರೋ ಎಂದು ಗೋವು ಕಳೆದುಕೊಂಡವರು ಶಾಸಕರಲ್ಲಿ ಆತಂಕ ವ್ಯಕ್ತಪಡಿಸಿದರು.
ಆರೋಪಿಗಳ ಪತ್ತೆಗೆ ಸೂಕ್ತ ಕ್ರಮಕ್ಕೆ ಆದೇಶಿಸುದಾಗಿ ಭರವಸೆ ನೀಡಿದ ಶಾಸಕರು, ಪತ್ತೆ ಹಚ್ಚಿದ ದನಗಳ ಬಿಡುಗಡೆಗೆ ಕೋರ್ಟ್’ಗೆ ತೆರಳುವ ವೆಚ್ಚಕ್ಕೆ ಎರಡು ಕುಟುಂಬದವರಿಗೆ ಧನ ಸಹಾಯ ಮಾಡಿದರು.
ಪರಿಹಾರ ವಿತರಣೆ ಬಳಿಕ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ ಅವರು, ಇತ್ತೀಚಿಗಿನ ದಿನದಲ್ಲಿ ಗೋವು ಕಳವು ಪ್ರಕರಣ ಹೆಚ್ಚುತ್ತಿದೆ. ಹಾಗೇ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ ಎಂದರು.
ಈ ಹಿಂದೆ ಮರಳುದಂಧೆಕೋರರು ಕಂಡ್ಲೂರು ಪೊಲೀಸ್ ಠಾಣೆಗೆ ಕಲ್ಲು ಹೊಡೆದಿದ್ದರು. ಆನಂತರ ಬಂಧಿತರಾಗಿದ್ದ ಅವರೆಲ್ಲರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈ ವ್ಯವಸ್ಥೆಯಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತಿದೆ. ಗುಲ್ವಾಡಿಯಲ್ಲಿ ಗೋವು ಕಳವು ಮಾಡುವಾಗ ಪೊಲೀಸ್ ಕೈಗೂ ಏಟಾಗಿತ್ತು. ಕಾನೂನು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಶಂಕರ ಪೂಜಾರಿ, ಪಕ್ಷದ ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ಶಿವರಾಜ್ ಪೂಜಾರಿ, ಶರತ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಗೋಪಾಲ ಪೂಜಾರಿ, ಸಿದ್ದೇಶ್ ಶ್ಯಾನ್ಬೋಗ್, ಗುರುರಾಜ ಎಲ್ಜಿತ್, ಸುಧಾಕರ ಶೆಟ್ಟಿ ನೆಲ್ಯಾಡಿ ಮುಂತಾದವರು ಉಪಸ್ಥಿತರಿದ್ದರು.
Discussion about this post