ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ #VoteBank ಸೃಷ್ಠಿ ಮಾಡುವುದು ಜಾತ್ಯತೀತತೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು, ಅಲ್ಪಸಂಖ್ಯಾತರ #minorities ಮತಬ್ಯಾಂಕ್ ಸೃಷ್ಟಿಸುವುದು ಜಾತ್ಯತೀತತೆಯ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಬಹುಪಾಲು ಹಿಂದೂಗಳು ಸಂಪೂರ್ಣವಾಗಿ ವಿಶಾಲ ಮನೋಭಾವ ಮತ್ತು ಸಹಿಷ್ಣುತೆ ಹೊಂದಿದ್ದಾರೆ. ಅವರು ಇತರ ಧರ್ಮಗಳು ಮಾಡುವ ರೀತಿಯಲ್ಲಿ ಧರ್ಮವನ್ನು ಪರಿಗಣಿಸುವುದಿಲ್ಲ ಎಂದಿದ್ದಾರೆ.
ಭಾರತದಲ್ಲಿ ಜಾತ್ಯತೀತತೆ ಉಳಿಯುತ್ತದೆ ಎಂದು ನಾನು ಆಶಾವಾದಿಯಾಗಿದ್ದೇನೆ. ಆಶಾವಾದವು ಹಿಂದೂ ಧರ್ಮದಿಂದಲೇ ಬರುತ್ತದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















