ನವದೆಹಲಿ: ಮಾದಕ ವ್ಯಸನಿ ಯುವಕನೊಬ್ಬ ಹಣ ನೀಡಲಿಲ್ಲವೆಂದ ಹೆತ್ತ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
22 ವರ್ಷದ ಅಶುತೋಷ್ ಎಂಬ ದುಷ್ಟ ಪುತ್ರನೇ ಆರೋಪಿಯಾಗಿದ್ದು, ಶಿಕ್ಷಾದೇವಿ ಎಂಬಾಕೆಯೇ ನತದೃಷ್ಠ ತಾಯಿ.
ಮುಂಜಾನೆ ಪ್ರಾರ್ಥನೆ ಮಾಡುತ್ತಿದ್ದ ತಾಯಿಯ ಬಳಿ ಅಶುತೋಷ್ ಹಣ ಕೇಳಿದ್ದಾನೆ. ಆದರೆ, ಇದಕ್ಕೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದೇ ಹಣವನ್ನೂ ಸಹ ನೀಡಲಿಲ್ಲ. ಇದರಿಂದ ಕೋಪಗೊಂಡ ಆತ ಗಟ್ಟಿ ವಸ್ತುವಿನಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾನೆ. ವಿಚಾರ ತಿಳಿದ ಅಕ್ಕಪಕ್ಕದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಾರೆ.
ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Discussion about this post