ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೌಟುಂಬಿಕ ವಿಚಾರವೆನ್ನಲಾದ ಮಾಹಿತಿಗೆ ಸಂಬಂಧಿಸಿದಂತೆ ನಿನ್ನೆ ಮದ್ಯರಾತ್ರಿ ನಡೆದ ಮಾರಾಮಾರಿಯಲ್ಲಿ ಇಬ್ಬರು ಬೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗ ಸರಹದ್ದಿನ ಸೂಳೆಬೈಲಿನಲ್ಲಿ ನಡೆದಿದೆ.
Also Read: ನೂತನ ತಂತ್ರಜ್ಞಾನಗಳ ಮೂಲಕ ಆಂಬ್ಯುಲೆನ್ಸ್ ಸೇವೆಯ ಪುನಶ್ಚೇತನ: ಸಚಿವ ಸುಧಾಕರ್
ಎರಡು ಕುಟುಂಬಗಳ ನಡುವಿನ ಜಗಳ ಇದೆನ್ನಲಾಗಿದ್ದು, ರಾತ್ರಿ ೧೨ ಗಂಟೆಯ ಹೊತ್ತಿಗೆ ಪರಸ್ಪರ ಜಗಳತಾರಕಕ್ಕೇರಿ ಇಬ್ಬರು ಸಾವು ಕಂಡಿದ್ದಾರೆ.
ಮೃತರನ್ನು ಪೈಂಟ್ ಕೆಲಸ ಮಾಡುವ ಸೂಳೆಬೈಲ್ ಶಾಂತಿನಗರ ವಾಸಿ ಅಹಮದ್(22) ಹಾಗೂ ಇದೇ ಬಡಾವಣೆ ವಾಸಿ ಅಬ್ದುಲ್ ದಸ್ತಗಿರಿ ಸಲ್ಮಾನ್ ಅಬ್ದುಲ್ಲಾ(23) ಎಂದು ಗುರುತಿಸಲಾಗಿದೆ.
ತುಂಗಾನಗರ ಪೊಲೀಸರು ಈ ಬಗ್ಗೆ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post