ನವದೆಹಲಿ: ಆತ 14 ವರ್ಷದ ಬಾಲಕ ಅಶ್ಫಾಕ್ ಅಲಿ. ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ಆತ ತನಗೆ ಗೊತ್ತಿಲ್ಲದೇ ಭಾರತದ ಗಡಿಯನ್ನು ದಾಟಿ ಬಂದಿದ್ದ.
ಗಡಿ ದಾಟಿದ ಆತನನ್ನು ನಿಯಮದಂತೆ ಭಾರತೀಯ ಸೇನೆ ಬಂಧಿಸಿ, ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ, ಆತ ಭಾರತದಲ್ಲಿ ಇದ್ದಿದ್ದು 14 ತಿಂಗಳುಗಳ ಕಾಲ. ಈಗ ವಿಚಾರಣೆಯೆಲ್ಲಾ ಮುಕ್ತಾಯವಾಗಿ ಆತನದ್ದು ಏನೂ ತಪ್ಪಿಲ್ಲ ಎಂದು ತಿಳಿದನಂತರ ವಾಘಾ ಗಡಿಯ ಮೂಲಕ ಆತನನ್ನು ಭಾರತೀಯ ಯೋಧರು ಗೌರವಯುತವಾಗಿ ಕಳುಹಿಸಿಕೊಟ್ಟಿದ್ದಾರೆ.

ವಾಘಾ ಗಡಿಯ ಮೂಲಕ ತಮ್ಮ ಮಾತೃ ದೇಶಕ್ಕೆ ತೆರಳುವ ವೇಳೆ ಆತ ಆಡಿದ ಮಾತುಗಳು ರೋಮಾಂಚನಗೊಳಿಸುತ್ತದೆ.
ಆತ ಹೇಳಿದ್ದಿಷ್ಟು:
ನಾನು ಗೊತ್ತಿಲ್ಲದೇ ಗಡಿ ದಾಟಿ ಬಂದು, ಬಂಧನಕ್ಕೊಳಗಾದೆ. ನನ್ನನ್ನು ಇಲ್ಲಿ ಎಷ್ಟು ಚೆನ್ನಾಗಿ, ಗೌರವಯುತವಾಗಿ ನೋಡಿಕೊಳ್ಳಲಾಗಿದೆ ಎಂದರೆ ನನಗೆ ಪಾಕಿಸ್ಥಾನಕ್ಕೆ ಮರಳಿ ಹೋಗಲು ಕೊಂಚವೂ ಮನಸ್ಸಿಲ್ಲ. ಭಾರತ ಅತ್ಯಂತ ಸಭ್ಯ ಹಾಗೂ ಸಂಸ್ಕಾರಯುತ ರಾಷ್ಟ್ರ. ಮೋದಿ ಸರ್ಕಾರದ ಆಡಳಿತದಲ್ಲಿ ನಾನು ಹೆದರಿದ್ದೆ. ಆದರೆ, ನನ್ನನ್ನು ನಡೆಸಿಕೊಂಡ ರೀತಿಯಿಂದ ಮೋದಿ ನೇತೃತ್ವದ ಭಾರತ ಸರ್ಕಾರದ ಬಗ್ಗೆ ಗೌರವ ಮೂಡಿದೆ. ನನಗೆ ಇಲ್ಲಿ ಕೆಲಸ ದೊರೆತರೆ ನಾನು ಇಲ್ಲಿಯೇ ಇರುತ್ತೇನೆ. ಪಾಕಿಸ್ಥಾನಕ್ಕೆ ಹೋಗಲು ನನಗೆ ಮನಸ್ಸಿಲ್ಲ. ನಾನು ಇಲ್ಲಿಯೇ ಕೆಲಸ ಮಾಡಲು ಭಾರತ ಸರ್ಕಾರ ನನಗೆ ಅವಕಾಶ ಕೊಡುಬೇಕು ಎಂದು ಕೇಳಿಕೊಳ್ಳುತ್ತೇನೆ.
ನಿಜಕ್ಕೂ ಈ ಬಾಲಕ ಹೇಳಿದ್ದು ಹೇಳಿದರೆ ತಾಯಿ ಭಾರತಿ ಎಂತಹ ಶ್ರೇಷ್ಠ ಪ್ರಧಾನ ಸೇವಕನನ್ನು ಪಡೆದಿದ್ದಾಳೆ ಎಂಬ ಹೆಮ್ಮೆ ಮೂಡುತ್ತದೆ.

















