ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಆತ್ಮಶ್ರೀ ಸರಿಗಮಪ ಸಂಗೀತ ಕಾರ್ಯಕ್ರಮ ಮತ್ತು ನಾಡಿನ ಗಣ್ಯ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ಮಾಡಲಾಯಿತು.
ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಎದುರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಆತ್ಮಶ್ರೀ ಸರಿಗಮಪ ಸಂಗೀತ ಕಾರ್ಯಕ್ರಮ ಮತ್ತು ನಾಡಿನ ಗಣ್ಯ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಡಾ. ವಿ. ಶ್ರೀಕಂಠಸ್ವಾಮಿ ದೀಕ್ಷಿತ್‌ರವರಿಗೆ ‘ವಿಶ್ವ ಮಾನವ ರತ್ನ ಪ್ರಶಸ್ತಿ, ಖ್ಯಾತ ಸಂಶೋಧಕ ಹಾಗೂ ಕಾದಂಬರಿಕಾರ ಡಾ. ಕೆ. ರಮಾನಂದರವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಸಿರಿ ಪ್ರಶಸ್ತಿ ಮತ್ತು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ‘ರಾಷ್ಟ್ರೀಯ ಯುವ ರತ್ನ ಪ್ರಶಸ್ತಿಯನ್ನು ಹಾಗೂ ಇನ್ನಿತರ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಜರಗನಹಳ್ಳಿ ಸದಾಶಿವಯ್ಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ ಗೋವಿಂದೇಹಳ್ಳಿ ಕೃಷ್ಣೇಗೌಡ, ಸಮಾಜ ಸೇವಕ ಡಾ.ಎಸ್.ಆರ್. ರೇಣುಕಾಪ್ರಸಾದ್, ಸಂಗೀತ ನಿದೇರ್ಶಕ ಬಿ. ಬಲರಾಮ್, ಕಲಾ ಪೋಷಕ ಡಾ. ಜಯಶಂಕರ್ ರೆಡ್ಡಿ ಎನ್.ವಿ. ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆಯೋಜಕರಾದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post