ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಐದು ಸಾವಿರ ವರ್ಷಗಳ ಸನಾತನ ಸಂಸ್ಕೃತ #Sanskrit ಭಾಷೆಯನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ ಸುಸಂಸ್ಕೃತ ಯುವಕರ ತಂಡವೊಂದು ಬೆಂಗಳೂರಿನಿಂದ ಬಿಳಿಗಿರಿ ರಂಗನಬೆಟ್ಟದ #BRHills ಕೆ. ಗುಡಿವರೆಗೂ ಬೈಕ್ ರ‍್ಯಾಲಿ ನಡೆಸಿದ್ದು, ಅಪರೂಪದ ವಿಭಿನ್ನ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.
ಸಂಸ್ಕೃತ ಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂಬ ಮಹೋನ್ನತ ಉದ್ದೇಶ ಹೊಂದಿರುವ ಸ್ಥಾಯಿ ಯುವಕರ ತಂಡವು ಇತ್ತೀಚೆಗೆ ಈ ಬೈಕ್ ರ‍್ಯಾಲಿ #BikeRally ನಡೆಸಿದ್ದು, 30 ಸವಾರರು ಪಾಲ್ಗೊಂಡಿದ್ದರು.
ಸಂಸ್ಕೃತ ಭಾಷೆ ಮತ್ತು ಅದರ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಿ, ಪ್ರಚಾರ ಮಾಡುವ ಉದ್ದೇಶದೊಂದಿಗೆ ಸ್ಥಾಯಿ ತಂಡವು ಅಸ್ತಿತ್ವಕ್ಕೆ ಬಂದಿದೆ.
ಅನರ್ಘ್ಯ ಪ್ರತಿಭೆ, ಬೆಲೆ ಕಟ್ಟಲಾಗದ ಚಿಂತನೆ, ಚಿಂತನಶೀಲತೆ, ವಿವೇಚನೆ, ಸೃಜನಶೀಲ, ಸೃಜನಶೀಲ ಮತ್ತು ವೈಚಾರಿಕ ಬುದ್ಧಿವಂತಿಕೆಯನ್ನು ಸಂಸ್ಕೃತ ಭಾಷೆ ಬೆಳೆಸುತ್ತಾ ಬಂದಿದೆ. ಆದರೆ, ಈ ಭಾಷೆ ವ್ಯಾಪಕವಾಗಿ ಬಳಕೆಯಾಗದೇ, ಸೀಮಿತ ಪ್ರದೇಶ ಮತ್ತು ಜನಗಳಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ, ಸಂಸ್ಕೃತ ಭಾಷೆಯನ್ನು ಉಳಿಸುವುದು ಹಾಗೂ ಬೆಳೆಸುವುದು ನಮ್ಮ ಮೂಲ ಉದ್ದೇಶವಾಗಿದೆ. ಇದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುವ ಉದ್ದೇಶ ಹೊಂದಿದ್ದೇವೆ ಎಂಬ ಅಭಿಪ್ರಾಯವನ್ನು ತಂಡದ ಸದಸ್ಯರು ವ್ಯಕ್ತಪಡಿಸಿದ್ದಾರೆ.
ಈ ತಂಡವು ಆನ್ಲೈನ್ ಮಾಧ್ಯಮದಲ್ಲಿ ಸಂಸ್ಕೃತ ಕಲಿಕೆಯ ಜೊತೆಗೆ ವಿಭಿನ್ನ ಪ್ರಯತ್ನಗಳಿಂದ ಯುವಕ ಯುವತಿಯರಲ್ಲಿ ಸಂಸ್ಕೃತದ ಬಗೆಗೆ ಜಾಗೃತಿ ಮೂಡಿಸುತ್ತಿದೆ. ಇದರ ಬಗೆಗೆ ಹೆಚ್ಚಿನ ಮಾಹಿತಿ Sthaayi.in ಅಂತರ್ಜಾಲದಲ್ಲಿ ಲಭ್ಯವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post