ಚೆನ್ನೈ: ಬೇಸಿಗೆಯ ಧಗೆಯ ನಡುವೆಯೇ ದಕ್ಷಿಣ ಭಾರತದ ಹಲವೆಡೆ ಈಗಾಗಲೇ ಒಂದಷ್ಟು ಮಳೆ ಸುರಿದಿರುವಂತೆಯೇ, ಇಂದು ಸಂಜೆ ವೇಳೆಗೆ ದಕ್ಷಿಣ ಭಾರತದ ಹಲವೆಡೆ ‘ಫನಿ’ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಆಗ್ನೇಯದ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮೇಲಿರುವ ಸೈಕ್ಲೋನಿಕ್ ಸ್ಟಾರ್ಮ್ ‘ಫನಿ’ ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಇದು ದಕ್ಷಿಣದ ಹಲವೆಡೆ ಅಪ್ಪಳಿಸಲಿದೆ ಎಂದು ವರದಿಯಾಗಿದೆ.
ಇದು ಚೆನ್ನೈ ಮತ್ತು ತಮಿಳುನಾಡಿನ ಆಗ್ನೇಯ ದಿಕ್ಕಿನಲ್ಲಿ 1110 ಕಿಮೀ ಮತ್ತು ಆಂಧ್ರಪ್ರದೇಶದ ಮಚಿಲಿಪಟ್ನಂನ 1300 ಕಿಮೀ ವೇಗದಲ್ಲಿ ಸಾಗುತ್ತಿದೆ. ಇದರ ಪರಿಣಾಮ ಕೇರಳದ ಹಲವು ಭಾಗಗಳಲ್ಲಿ ಭಾರೀ ಮಳೆ ಉಂಟು ಮಾಡಲಿದೆ.
ಇದಲ್ಲದೇ, ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ, ಪಾಂಡಿಚೆರಿಯ ತೀರಪ್ರದೇಶ, ಗಲ್ಫ್ ಆಫ್ ಮ್ಯಾನ್ಮಾರ್’ಗಳಲ್ಲಿ ಮಳೆಯಾಗಲಿದ್ದು, ಕರ್ನಾಟಕದ ಕೆಲವು ಭಾಗಗಳಲ್ಲೂ ಸಹ ಮಳೆಯಾಗಲಿದೆ ಎಂದು ವರದಿಯಾಗಿದೆ.
Discussion about this post