ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೆಯ ಹಂತದ ಮತದಾನ ಎಪ್ರಿಲ್ 29ರ ನಾಳೆ ನಡೆಯಲಿದ್ದು, ಕಣದಲ್ಲಿರುವ 928 ಅಭ್ಯರ್ಥಿಗಳಲ್ಲಿ 210 ಮಂದಿ ಕ್ರಿಮಿನಲ್ ವ್ಯಕ್ತಿಗಳಿದ್ದಾರೆ.
ಈ ಕುರಿತಂತೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮಾಹಿತಿ ಪ್ರಕಟಿಸಿದ್ದು, ಇದರ ಅಂಕಿಅಂಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ.
210 ಅಭ್ಯರ್ಥಿಗಳಲ್ಲಿ 158 ಮಂದಿ ಗಂಭೀರವಾದ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದು, 12 ಅಭ್ಯರ್ಥಿಗಳ ವಿರುದ್ಧ ಈಗಾಗಲೇ ಅಪರಾಧಿಗಳು ಎಂದು ಘೋಷಣೆಯಾಗಿದೆ. 5 ಅಭ್ಯರ್ಥಿಗಳು ಕೊಲೆ ಆರೋಪ ಹೊಂದಿದ್ದು, 24 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ ಆರೋಪ, ನಾಲ್ವರ ವಿರುದ್ಧ ಕಿಡ್ನಾಪ್, 21 ಅಭ್ಯರ್ಥಿಗಳ ವಿರುದ್ಧ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ, 16 ಅಭ್ಯರ್ಥಿಗಳ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಗಳು ದಾಖಲಾಗಿವೆ.
Discussion about this post