ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸ್ಯಾಂಡಲ್’ವುಡ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಭದ್ರಾವತಿಯ ಬಿಆರ್’ಪಿಗೆ ಭೇಟಿ ನೀಡಿದ್ದು, ಎರಡು ದಿನ ಐಬಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಡಿ ಬಾಸ್ ದರ್ಶನ್’ಗೆ ವನ್ಯಜೀವಿ ಛಾಯಾಗ್ರಹಣ ಮಾಡುವುದೆಂದರೆ ಅಚ್ಚುಮೆಚ್ಚು. ಇದಕ್ಕಾಗಿ ದೇಶದ ಮತ್ತು ವಿದೇಶದ ನಾನಾ ಸಫಾರಿಗಳಿಗೆ ಈಗಾಗಲೇ, ಇವರು ಭೇಟಿ ನೀಡಿದ್ದು, ಇಂದು ಮತ್ತು ನಾಳೆ ಬಿಆರ್’ಪಿ ಜಂಗಲ್ ನಲ್ಲಿ ಸಫಾರಿ ನಡೆಸಲಿದ್ದಾರೆ.
ಈ ವೇಳೆ ಕಾಡು ಪ್ರಾಣಿಗಳ ಫೋಟೋಗ್ರಫಿ ಕೂಡ ಇವರು ಮಾಡಲಿದ್ದು, ಇದಕ್ಕಾಗಿ ಇವರು ಸಜ್ಜಾಗಿ ಬಂದಿದ್ದಾರೆ.
ನಿನ್ನೆ ಶುಕ್ರವಾರ ಸಂಜೆ ಶಿವಮೊಗ್ಗಕ್ಕೆ ಆಗಮಿಸಿರುವ ಅವರು, ಭರ್ತಿಯಾಗುತ್ತಿರುವ ಭದ್ರಾ ಡ್ಯಾಂ ವೀಕ್ಷಿಸಿ, ಆನಂದಿಸಿದ್ದಾರೆ. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್’ಗೆ ಹಾಸ್ಯ ನಟ ಚಿಕ್ಕಣ್ಣ ಸಾಥ್ ನೀಡಿದ್ದು, ಅರಣ್ಯ ಇಲಾಖೆಯ ಐಬಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಭದ್ರಾ ಅಭಯಾರಣ್ಯದಲ್ಲಿರುವ ಬ್ರಿಟಿಷರ ಕಾಲದ ಐಬಿಯಲ್ಲಿ ಇಂದು ಮಧ್ಯಾಹ್ನದ ಊಟ ಸವಿಯಲಿದ್ದು, ಸಫಾರಿ ಜೊತೆಗೆ ಫೋಟೋಗ್ರಫಿ ನಡೆಸಲಿದ್ದಾರೆ.
ದರ್ಶನ್ ಮತ್ತು ತಂಡ ಎರಡು ದಿನಗಳ ಕಾಲ ಅಭಯಾರಣ್ಯದಲ್ಲಿಯೇ ಉಳಿಯಲಿದ್ದು, ಸಫಾರಿ ಮಜಾ ಮುಗಿಸಿ, ನಾಳೆ ಭಾನುವಾರ ಸಂಜೆ ತೆರಳಲಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ದರ್ಶನ್ ಇಲ್ಲಿ ತಂಗಿರುವ ವೇಳೆ ಯಾರ ಭೇಟಿಗೂ ಅವಕಾಶವಿಲ್ಲ ಎಂದು ತಿಳಿದುಬಂದಿದೆ.
Get In Touch With Us info@kalpa.news Whatsapp: 9481252093

















