ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ಪ್ರತಿಯೊಬ್ಬರ ಜೀವನದಲ್ಲಿ ಹುಟ್ಟು ಹಬ್ಬ ವಿಶೇಷ ಸ್ಥಾನವನ್ನು ಪಡೆದುಕೊಂಡಿರುತ್ತದೆ. ನಮ್ಮ ಜನನ ಸಾರ್ಥಕವಾಗುವಂತೆ ನಾವು ಸಾಧನೆ ಮಾಡಬೇಕು. ಅಂತಹ ಸಾಧನೆಯನ್ನು ಸಾಧಿಸುವುದಕ್ಕೆ ನಿರಂತರ ಪ್ರಯತ್ನ ಪಡಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನ್ಯಾಯಾಧೀಶರಾಗಿ ಆಯ್ಕೆಗೊಂಡ ವಿದ್ಯಾ ಎ.ಎಸ್. ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಡೆದ ಸಾಮೂಹಿಕ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಲವಾರು ಅವಕಾಶಗಳು ವಿದ್ಯಾರ್ಥಿಗಳ ಎದುರಿಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ. ನಿಮ್ಮೆಲ್ಲರಿಗೂ ಉತ್ತಮವಾದ ಭವಿಷ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹೂ ನೀಡಿ, ಅಕ್ಷತೆ ಹಾಕಿ ಆಶೀರ್ವದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಸತಿ ನಿಲಯಗಳ ಖಜಾಂಚಿ ಸುಬ್ಬಣ್ಣ ಶಾಸ್ತ್ರಿ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ಮುಖ್ಯನಿಲಯ ಪಾಲಕ ಗೋವಿಂದರಾಜ ಶರ್ಮಾ, ಎ.ಎಸ್. ವಿದ್ಯಾ, ದೇವರಾಜ್, ವಸತಿ ನಿಲಯ ಪಾಲಕರು ಉಪಸ್ಥಿತರಿದ್ದರು.
ಯಶಸ್ ವಿದ್ಯಾರ್ಥಿಗಳಾದ ರುಚಿತಾ ಹೆಗ್ಡೆ ಸ್ವಾಗತಿಸಿ, ಸಾಕ್ಷಿತಾ ವಂದಿಸಿದರು. ವಿದ್ಯಾರ್ಥಿನಿ ಮೈಥಿಲಿ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post