ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವರಾತ್ರಿ/ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ನೈಋತ್ಯ ರೈಲ್ವೆ ವತಿಯಿಂದ ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ನಗರಗಳಿಗೆ ಒಟ್ಟು 51 ವಿಶೇಷ ರೈಲುಗಳಲ್ಲಿ ಓಡಿಸುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, 51 ವಿಶೇಷ ರೈಲುಗಳು ಸಂಚಲಿಸಲಿದೆ. ಇದರಲ್ಲಿ 11 ಕಾಯ್ದಿರಿಸದ ವಿಶೇಷ ರೈಲುಗಳು, 27 ಎಕ್ಸ್’ಪ್ರೆಸ್ ರೈಲುಗಳು, 3 ತಾತ್ಕಾಲಿಕ ನಿಲುಗಡೆಗಳು, 2 ತಾತ್ಕಾಲಿಕ ವಿಸ್ತರಣೆಗಳು ಹಾಗೂ 8 ರೈಲುಗಳ ಅವಧಿ ವಿಸ್ತರಣೆಗಳು ಸೇರಿವೆ ಎಂದು ತಿಳಿಸಿದೆ.
ಈ ಸೇವೆಗಳು ಮೈಸೂರು ವಿಭಾಗವನ್ನು ಅಶೋಕಪುರಂ, ಬೆಂಗಳೂರು, ಬೆಳಗಾವಿ, ಯಶವಂತಪುರ, ಶಿವಮೊಗ್ಗ ಟೌನ್, ವಿಜಯಪುರ, ಅರಸೀಕೆರೆ, ಕಾರೈಕುಡಿ, ಮಡಗಾಂ, ರಾಮನಾಥಪುರಂ, ಚಾಮರಾಜನಗರ, ತಾಳಗುಪ್ಪ ಹಾಗೂ ತಿರುನೆಲ್ವೆಲಿಯಂತಹ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕ ಕಲ್ಪಿಸಲಿವೆ.
ಹಿಂದಿನ ವರ್ಷ ಎಷ್ಟು ಜನ ಪ್ರಯಾಣಿಸಿದ್ದರು?
ಹಿಂದಿನ ವರ್ಷದ ದಸರಾ ಸಂದರ್ಭದಲ್ಲಿ ಮೈಸೂರು ವಿಭಾಗದಲ್ಲಿ ಒಟ್ಟು 6.91 ಲಕ್ಷ ಪ್ರಯಾಣಿಕರ ಸಂಚಾರ ದಾಖಲಾಗಿದ್ದು, ಪ್ರತಿದಿನ ಸರಾಸರಿ 69,000 ಪ್ರಯಾಣಿಕರು ಹಾಗೂ ದಸರಾ ದಿನದಂದು ಮಾತ್ರ 1.10 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ಈ ವರ್ಷದ ಹೆಚ್ಚುವರಿ ರೈಲು ಸೇವೆಗಳ ಮೂಲಕ ಇನ್ನೂ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ನಿರೀಕ್ಷಿಸಲಾಗುತ್ತಿದ್ದು, ಭವ್ಯವಾದ ದಸರಾ ಹಬ್ಬದ ಸಂದರ್ಭದಲ್ಲಿ ಸುರಕ್ಷಿತ, ಸುಗಮ ಹಾಗೂ ಆರಾಮದಾಯಕ ಪ್ರಯಾಣ ಒದಗಿಸುವ ನೈಋತ್ಯ ರೈಲ್ವೆ ಬದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.
ಹೀಗಿದೆ ವಿಶೇಷ ರೈಲುಗಳ ಪಟ್ಟಿ:
ಪ್ರಯಾಣಿಕರ ಭದ್ರತೆಗೆ ಮಹತ್ವದ ಕ್ರಮ
ಜನಸಮೂಹ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸಲು 70 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 150 ಕ್ಕೂ ಹೆಚ್ಚು ಆರ್’ಪಿಎಫ್ ಮತ್ತು ಜಿಆರ್’ಪಿ ಸಿಬ್ಬಂದಿ, ಜೊತೆಗೆ 50 ಸಿಸಿಟಿವಿ ಕ್ಯಾಮೆರಾಗಳ ನಿಗಾ ಒದಗಿಸಲಾಗಿದೆ. ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಮೂರು ‘ಸಹಾಯಕ’ ಕಿಯಾಸ್ಕ್’ಗಳು (ಎರಡು ವಲಯ ಪ್ರದೇಶದಲ್ಲಿ ಹಾಗೂ ಒಂದು 6ನೇಪ್ಲಾಟ್ ಫಾರಂನಲ್ಲಿ) ಸ್ಥಾಪಿಸಲಾಗಿದೆ.
ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಪ್ರತಿ ಪಾದಚಾರಿ ಸೇತುವೆಯಲ್ಲಿ ಮತ್ತು ಸುರಂಗಮಾರ್ಗಗಳ ಎರಡೂ ತುದಿಗಳಲ್ಲಿ ಟಿಕೆಟ್ ಪರಿಶೀಲನೆ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ನಾಲ್ಕು ಟಿಟಿಇಗಳನ್ನು ನಿಯೋಜಿಸಲಾಗಿದೆ. ವಾಕಿ-ಟಾಕಿಗಳನ್ನು ಹೊಂದಿದ ಸಿಬ್ಬಂದಿ ಭದ್ರತೆ ಮತ್ತು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಾರೆ. ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿಯ ಬೆಂಬಲದೊಂದಿಗೆ ವಿದ್ಯುತ್ ಸಿಬ್ಬಂದಿ ಎಸ್ಕಲೇಟರ್ಗಳನ್ನು ನಿರ್ವಹಿಸುತ್ತಾರೆ. ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ಪೊಲೀಸ್ ಸೇವೆಗಳು ಸೇರಿದಂತೆ ರಾಜ್ಯ ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯವನ್ನು ಸಹ ಸ್ಥಾಪಿಸಲಾಗಿದೆ.
ಎಸ್ಕಲೇಟರ್’ಗಳನ್ನು ನಿರಂತರವಾಗಿ ಕಾರ್ಯ ನಿರ್ವಹಿಸಲು ವಿದ್ಯುತ್ವಿ ಭಾಗದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ ಆಂಬ್ಯುಲೆನ್ಸ್, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ.
ವಿಶೇಷ ಟಿಕೆಟ್ ವ್ಯವಸ್ಥೆಗಳಲ್ಲಿ ಐಆರ್’ಸಿಟಿಸಿ ಇಂಟಿಗ್ರೇಟೆಡ್ ರಿಫ್ರೆಶ್ಮೆಂಟ್ ಕೋಣೆಯ ಬಳಿ ಇರುವ ಒಂದು ಎಟಿವಿಎಂ ಅನ್ನು ಜನದಟ್ಟಣೆ ಕಡಿಮೆ ಮಾಡುವ ಕೌಂಟರ್’ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಜೊತೆಗೆ ನಾಲ್ಕು ಪೂರ್ವ-ಮುದ್ರಿತ ಟಿಕೆಟ್ ಕೌಂಟರ್’ಗಳನ್ನು (ಮುಖ್ಯ ಪ್ರವೇಶದ್ವಾರದಲ್ಲಿ ಮೂರು ಮತ್ತು ಎರಡನೇ ಪ್ರವೇಶದ್ವಾರದಲ್ಲಿ ಒಂದು) ಸ್ಥಳಾಂತರಿಸುವುದು ಸೇರಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಭಾಗೀಯ ಕಚೇರಿ ಆವರಣದಲ್ಲಿ ಎರಡು ಹೆಚ್ಚುವರಿ ಟಿಕೆಟ್ ಕೌಂಟರ್’ಗಳನ್ನು ತೆರೆಯಲಾಗುತ್ತಿದೆ. ರೈಲು ಸೇವೆಗಳ ಕುರಿತು ಮಾಹಿತಿಯನ್ನು ಪ್ರಸಾರ ಮಾಡಲು ಸ್ಪಷ್ಟ ಪ್ರದರ್ಶನ ಫಲಕಗಳು ಮತ್ತು ಬ್ಯಾನರ್’ಗಳನ್ನು ಸ್ಥಾಪಿಸಲಾಗುತ್ತಿದೆ.
ಅ.2ರಂದು, ಬಗ್ಗಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಪ್ರಯಾಣಿಕರ ಸುಗಮ ನಿರ್ವಹಣೆಗೆ ಅನುಕೂಲವಾಗುವಂತೆ ಮಧ್ಯಾಹ್ನ 2 ಗಂಟೆಯಿಂದ ಪಾರ್ಸೆಲ್ ಲೋಡಿಂಗ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.
2025 ರ ದಸರಾ ಸಮಯದಲ್ಲಿ ಸುರಕ್ಷಿತ, ಆರಾಮದಾಯಕ ಮತ್ತು ತೊಂದರೆ-ಮುಕ್ತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು, ಸಿಬ್ಬಂದಿಯೊಂದಿಗೆ ಸಹಕಾರವನ್ನು ವಿಸ್ತರಿಸಲು ಮತ್ತು ಸೂಚನೆಗಳನ್ನು ಅನುಸರಿಸಲು ಮೈಸೂರು ವಿಭಾಗದ ನೈಋತ್ಯ ರೈಲ್ವೆ ಎಲ್ಲಾ ಪ್ರಯಾಣಿಕರಿಗೆ ಮನವಿ ಮಾಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post