ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿಗೆ ಕ್ರಮಕೈಗೊಳ್ಳಬೇಕು ಹಾಗೂ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಸೂಚನೆ ನೀಡಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿನಾದ್ಯಂತ 70 ಲಕ್ಷ ಜನ ತಂಬಾಕು ಉತ್ಪನ್ನಗಳನ್ನು ಬಳಸಿ ಅಕಾಲಿಕ ಮರಣ ಹೊಂದುತ್ತಿದ್ದಾರೆ ಎಂದರು.

ಸ್ಮಾರ್ಟ್‍ಸಿಟಿ ಅಡಿಯಲ್ಲಿ ಬರುವಂತಹ ನಗರ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಪ್ರಯಾಣಿಕರ ಸೂಚನೆಗಳು ಉದಾ: ಧೂಮಪಾನ ನಿಷೇಧ, ಮದ್ಯಪಾನ ನಿಷೇಧ ಇಂತಹ ಚಿಹ್ನೆಗಳಿರುವ ನಾಮಫಲಕಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು.
ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಮಾತಾನಾಡಿ ಏಪ್ರಿಲ್‍ನಿಂದ ಇಲ್ಲಿಯವರೆಗೂ ಜಿಲ್ಲೆಯಾದ್ಯಂತ ಒಟ್ಟು 39 ತಂಬಾಕು ದಾಳಿಗಳನ್ನು ಕೈಗೊಂಡು ಸೆಕ್ಷನ್-4 ರ ಅಡಿಯಲ್ಲಿ 540 ಪ್ರಕರಣ ರೂ.81,400, ಸೆಕ್ಷನ್-6ಎ ಅಡಿಯಲ್ಲಿ 97 ಪ್ರಕರಣ ರೂ.11,550 ಹಾಗೂ ಸೆಕ್ಷನ್-6ಬಿ ಅಡಿಯಲ್ಲಿ 49 ಪ್ರಕರಣ ರೂ.6,650 ಒಟ್ಟು 686 ಪ್ರಕರಣಗಳು 99,600ರೂ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಡಾ.ನಾಗರಾಜ್, ಅಬಕಾರಿ ಉಪ ಆಯುಕ್ತರು, ಶಿವಪ್ರಸಾದ್, ಜಿಲ್ಲಾ ಶಸ್ತ್ರ ಚಿಕಿತ್ಸಕ, ಡಾ.ಷಣ್ಮುಖಪ್ಪ, ಆರ್.ಟಿ.ಓ ಶ್ರೀಧರ್ ಮಲ್ಲಾಡ್, ತಹಶೀಲ್ದಾರ ಬಸವರಾಜ್ ಕೋಟೂರು, ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾದ ಪ್ರದೀಪ್ & ಲೊಕೇಶ್, ಕೃಷಿ ಇಲಾಖೆಯ ಡಾ.ಪವನ್, ಮಹಾನಗರ ಪಾಲಿಕೆಯ ಡಾ.ಸುದೀಂದ್ರ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ ಭಾಗವಹಿಸಿದ್ದರು.










Discussion about this post