ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಕೊರೋನಾ ಜಾಗೃತಿಗಾಗಿ ದಾವಣಗೆರೆ ಜಿಲ್ಲಾ ಪೋಲಿಸ್ ಇಲಾಖೆಯಿಂದ ನಿರ್ಲಕ್ಷತೆಯ ಪರಿಣಾಮ ಎನ್ನುವ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ ಬಿಡುಗಡೆ ಮಾತನಾಡಿದ್ದು, ಪ್ರತಿ ವ್ಯಕ್ತಿಯು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಮತ್ತು ತನ್ನ ಕುಟುಂಬದ ಸುರಕ್ಷತೆಗಾಗಿ ಮನೆಯಲ್ಲಿಯೇ ಇರಬೇಕು ಎಂದರು.
ಲಾಕ್’ಡೌನ್ ಆದೇಶವನ್ನು ಉಲ್ಲಂಘಿಸುವುದರಿದ ಆಗುವ ದುಷ್ಪರಿಣಾಮವನ್ನು ಬಹಳ ಪರಿಣಾಮಕಾರಿಯಾಗಿ ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿರಬೇಕು ಎಂದು ಕರೋನ ಪಾತ್ರದಾರಿಯ ಮೂಲಕ ಕಥೆಯನ್ನು ಹೇಳಿಸುತ್ತಾ, ಬಹಳ ಸರಳವಾಗಿ ಚಿತ್ರಿಕರಿಸಿ ತೋರಿಸಲಾಗಿದೆ. ಚಿತ್ರವು ಬಹಳ ಕುತುಹಲಕರವಾಗಿ ಸಾಗುವುದರಿಂದ ಹೆಚ್ಚಿನ ಜನರಿಗೆ ಇದರ ಉದ್ದೇಶ ಮನವರಿಕೆ ಯಾಗುತ್ತದೆ ಎಂದು ಚಿತ್ರಿಕರಣದ ಮೇಲ್ವಿಚಾರಣೆಯನ್ನು ವಹಿಸಿದ್ದ ಡಿವೈಎಸ್‌ಪಿ ಮಂಜುನಾಥ ಕೆ. ಗಂಗಲ್ ರವರು ಹೇಳಿದರು.
ದಾವಣಗೆರೆಯವರೇ ಆದ ಜ್ಞಾನೇಶ್ವರ್ ಜವಳಿ ನಿರ್ದೇಶನ ಮತ್ತು ಸಂಕಲನ ಮಾಡಿದ್ದಾರೆ. ಕೃಷ್ಣಸಾ ಪಿ ರಾಜೋಳಿ ಮತ್ತು ಮಂಜುನಾಥ ಪಿ ರಾಜೋಳಿಯವರ ಪರಿಕಲ್ಪನೆ ಮತ್ತು ಛಾಯಾಗ್ರಹಣ ಇದೆ. ಸ್ಥಳೀಯ ಕಲಾವಿದರೊಂದಿಗೆ ಪೋಲಿಸರು, ವೈದ್ಯಕೀಯ ಸಿಬ್ಬಂದಿ ಮತ್ತು ಪತ್ರಕರ್ತರು ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಕಿರುಚಿತ್ರವನ್ನು https://youtu.be/HbddzDA9a4k ಲಿಂಕನ್ನು ಬಳಸಿ ಯುಟ್ಯೂಬ್’ನಲ್ಲಿ ನೋಡಬಹುದಾಗಿದೆ.
ಸರಳ ಕಾರ್ಯಕ್ರಮದಲ್ಲಿ ಜ್ಞಾನೇಶ್ವರ್ ಜವಳಿ, ಕೃಷ್ಣಸಾ ಪಿ ರಾಜೋಳಿ, ಮಂಜುನಾಥ ಪಿ ರಾಜೋಳಿ, ಪಂಚಾಕ್ಷರಿ ಶ್ರೀಹರ್ಷ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post