ಕಲ್ಪ ಮೀಡಿಯಾ ಹೌಸ್
ದಾವಣಗೆರೆ: ಜಿಲ್ಲೆಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ರಾತ್ರಿ ಪ್ರತ್ಯೇಕ ಕೊಠಡಿಯಲ್ಲಿ ವಾಸ್ತವ್ಯ ಮಾಡುವ ಮೂಲಕ ತಾಲೂಕಿನ ಕೊರೋನಾ ಸೋಂಕಿತರಿಗೆ ಮನೋಬಲ ಹೆಚ್ಚಿಸಲು ಮುಂದಾಗಿದ್ದಾರೆ.
ಮೂರು ದಿನಗಳ ಕಾಲ ಕೋವಿಡ್ ಸೋಂಕಿತ ಬಂಧುಗಳ ಜೊತೆ ವಾಸ್ತವ್ಯ ಮಾಡಿ, ಪ್ರತಿದಿನ ಬೆಳಗ್ಗೆ ಯೋಗಾಭ್ಯಾಸ, ಸಂಜೆ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲಿದ್ದು, ತನ್ನ ಕುಟುಂಬದ ಭಾಗವಾಗಿರುವ ತನ್ನ ಮತ ಕ್ಷೇತ್ರದ ಕೋವಿಡ್ ಸೋಂಕಿತ ಬಂಧುಗಳ ಜೊತೆಗಿರುವುದು ನನ್ನ ಕರ್ತವ್ಯವಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post