ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಇಲ್ಲಿನ ಖಾಸಗಿ ಹಾಸ್ಟೆಲ್’ವೊಂದರಲ್ಲಿ ಬಾಯ್ಲರ್ ಡ್ರಮ್ ಬಿದ್ದು ನಾಲ್ಕನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ #Death ದಾರುಣ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ನಾಲ್ಕನೇ ತರಗತಿ ಕಲಿಯುತ್ತಿದ್ದ ರಂಗನಾಥ್(9) ಎಂದು ಗುರುತಿಸಲಾಗಿದೆ.
Also Read>> ಭಾರತದ ಇತಿಹಾಸದಲ್ಲೇ ಮೊದಲು | ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ವಿವಾಹ | ಯಾರದ್ದು?
ಹರಿಹರ ತಾಲೂಕಿನ ಜಿಗಳಿ ಗ್ರಾಮದ ರಂಗನಾಥ್ ದಾವಣಗೆರೆಯ #Davanagere ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಖಾಸಗಿ ವಸತಿ ಶಾಲೆಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.ಘಟನೆ ಹೇಗಾಯ್ತು?
ಟೆರಸ್ ಮೇಲಿದ್ದ ಬಾಯ್ಲರ್ ಡ್ರಮ್ ಮುರಿದು ಬಿದ್ದು ಗಾಯಗೊಂಡಿದ್ದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಗನಾಥ್ ಮಂಗಳವಾರ ಮೃತಪಟ್ಟಿದ್ದಾನೆ.
Also read: ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ | ಸಿಎಂ ಸಿದ್ದರಾಮಯ್ಯ ಸಿದ್ಧತೆ
ರಂಗನಾಥ್ ಪೋಷಕರು ವಸತಿಯುತ ಶಾಲೆ ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲಯದ ವಾರ್ಡನ್ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ಪುತ್ರ ಗಾಯಗೊಂಡಿರುವ ವಿಷಯವನ್ನು ಪೋಷಕರಿಗೂ ತಿಳಿಸಿಲ್ಲ ಎಂದು ಪೋಷಕರು ದೂರಿದ್ದಾರೆ.
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post