ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ದಾವಣಗೆರೆಯಲ್ಲಿ 21 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ-ದಾವಣಗೆರೆ ಜಿಲ್ಲಾ ಗಡಿಯನ್ನು ಅತ್ಯಂತ ಬಿಗಿಗೊಳಿಸಲಾಗಿದ್ದು, ಇಂದು ಡಿಸಿ, ಎಸ್’ಪಿ ಚೆಕ್’ಪೋಸ್ಟ್’ಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸೊರಬ ತಾಲೂಕಿನ ವ್ಯಾಪ್ತಿಯಲ್ಲಿರುವ ಸುತುಕೋಟಿ ಬಳಿಯ ಚೆಕ್’ಪೋಸ್ಟ್’ಗೆ ಇಂದು ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರುಗಳು, ಪರಿಶೀಲನೆ ನಡೆಸಿದರು.

ಚೆಕ್’ಪೋಸ್ಟ್’ಗೆ ಭೇಟಿ ನೀಡಿದ ಅವರು, ಸ್ವತಃ ಹಲವು ವಾಹನಗಳ ಪರಿಶೀಲನೆ ನಡೆಸಿ, ಎಲ್ಲಿಗೆ ಹಾಗೂ ಯಾವ ಕಾರಣಕ್ಕಾಗಿ ತೆರಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇನ್ನು, ಅಧಿಕೃತ ಪಾಸ್ ಹೊಂದಿಲ್ಲದ ದಾವಣಗೆರೆ ಜಿಲ್ಲೆಯಿಂದ ಆಗಮಿಸುವ ಯಾವುದೇ ವಾಹನಗಳನ್ನು ಶಿವಮೊಗ್ಗ ಜಿಲ್ಲೆಯೊಳಕ್ಕೆ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶಿಕಾರಿಪುರ-ಹೊನ್ನಾಳಿ ಚೆಕ್ ಪೋಸ್ಟ್’ಗೂ ಭೇಟಿ
ಇನ್ನು, ಶಿಕಾರಿಪುರ ಹಾಗೂ ಹೊನ್ನಾಳಿ ನಡುವೆ ಇರುವ ಜಕ್ಕಿನಕೊಪ್ಪ ಚೆಕ್’ಪೋಸ್ಟ್’ಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿದರು.
Get in Touch With Us info@kalpa.news Whatsapp: 9481252093
















