ಕಲ್ಪ ಮೀಡಿಯಾ ಹೌಸ್ | ದೆಹಲಿ |
ನಾವು ಪ್ರತಿದಿನ ಹೊಸಹೊಸ ವಿವಾದಗಳನ್ನು ಹುಟ್ಟುಹಾಕಬಾರದು. ಮತ್ತು ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ Mohan Bhagawath ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದವನ್ನು ಮತ್ತೊಂದು ಅಯೋಧ್ಯೆ ವಿವಾದವಾಗಿಸಬೇಕು ಎನ್ನುವ ಪ್ರಯತ್ನಗಳಿಗೆ ಭಾಗವತ್ ಅವರ ಈ ಹೇಳಿಕೆ ತಣ್ಣೀರು ಎರಚಿದ್ದು, ನಿರಂತರ ಪ್ರತಿಭಟನೆಗಳನ್ನು ನಡೆಸುವ ಮೂಲಕ ದೇಶವ್ಯಾಪಿ ಜನಾಂದೋಲನವಾಗಿಸಬೇಕು ಎಂದು ಹಿಂದುತ್ವ ಪರ ಹೋರಾಟಗಾರರು ಯತ್ನಿಸುತ್ತಿದ್ದಾರೆ. ಇಂಥ ಪ್ರಯತ್ನಗಳನ್ನು ಆರ್‌ಎಸ್‌ಎಸ್ RSS ಸಮರ್ಥಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಪ್ರದೇಶಗಳ ಬಗ್ಗೆ ನಮಗೆ ಭಕ್ತಿ ಇರುತ್ತದೆ. ಅದರ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ. ಆದರೆ ಪ್ರತಿದಿನ ಹೊಸಹೊಸ ಸ್ಥಳಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಾಗಲಾರದು. ನಾವು ಪ್ರತಿದಿನ ಹೊಸಹೊಸ ವಿವಾದಗಳನ್ನು ಹುಟ್ಟುಹಾಕಬಾರದು. ಜ್ಞಾನವಾಪಿ ಮಸೀದಿ ಬಗ್ಗೆ ನಮಗೆ ಶ್ರದ್ಧೆಯಿದೆ. ಆ ವಿಚಾರದಲ್ಲಿ ನಾವು ಏನು ಮಾಡುತ್ತಿದ್ದೇವೆಯೋ ಅದು ಆ ಶ್ರದ್ಧೆಗೆ ಅನುಗುಣವಾಗಿದೆ. ಹಾಗೆಂದು ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
Also read: ಕಲಬುರಗಿ: ಹೊತ್ತಿ ಉರಿದ ಬಸ್! ನಾಲ್ವರು ಸಜೀವ ದಹನ ಶಂಕೆ
ಕೋರ್ಟ್ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ನಡೆದ ವಿಡಿಯೋ ಸಮೀಕ್ಷೆಯಲ್ಲಿ ಶಿವಲಿಂಗದಂಥ ಆಕೃತಿ ಪತ್ತೆಯಾಗಿದೆ ಎಂಬ ವರದಿಗಳು ಬಹಿರಂಗವಾದ ನಂತರ ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವೈಮನಸ್ಸು ಮೂಡುವ ಬೆಳವಣಿಗೆಗಳು ನಡೆದಿತ್ತು. ಪ್ರಸ್ತುತ ಈ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥರು ನೀಡಿರುವ ಹೇಳಿಕೆಯು ಹಲವು ಕಾರಣಗಳಿಂದ ಮಹತ್ವ ಪಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post