ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಜೀವನದಲ್ಲಿ ವ್ಯಕ್ತಿಗಳೇ ಇರಲಿ ವಸ್ತುಗಳೇ ಇರಲಿ ಬೇಡಿಕೆ ಪೂರೈಕೆಗಳ ಆಧಾರದ ಮೇಲೆ ಸಂಬಂಧ ಕೆಲಸಗಳು ನಡೆಯುತ್ತಲಿರುತ್ತದೆ. ಆದರೆ ಜನರಿಗೆ ನಮ್ಮಿಂದ ಮಾತ್ರ ಕೆಲಸ ಅಥವಾ ಸಂಬಂಧಕ್ಕೆ ಬೆಲೆ ಎಂಬ ಅಹಂಕಾರ ಬಂದಾಗ ಕೆಲಸ ಇರಲಿ ಸಂಬಂಧ ಇರಲಿ ಕೆಡುತ್ತದೆ.
ಜೀವನದ ಈ ಬೇಡಿಕೆ ಪೂರೈಕೆಯ ಸಂಬಂಧಗಳಲ್ಲಿ ಒಬ್ಬರ ಬಳಿ ಬೇಕಾದ್ದು ಇರುತ್ತದೆ ಇನ್ನೊಬ್ಬರಿಗೆ ಬೇಕಾಗಿರುತ್ತದೆ. ಇಂತಹ ಸಂಬಂಧಗಳನ್ನು ಪರಸ್ಪರ ಹೊಂದಾಣಿಕೆ ಸಂಬಂಧ ಮಾಡಿಕೊಳ್ಳಬೇಕು. ಸ್ಪರ್ಧೆ ಅಹಂಕಾರ ಅಥವಾ ಬೇರೆ ರೀತಿಯಲ್ಲಿ ನೋಡಿದರೆ ಹೊಂದಾಣಿಕೆ ಇರದೇ ಜೋಡಿಗಳು, ಸ್ನೇಹ ಸಂಬಂಧಗಳು ಕೆಡುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post