ಕಲ್ಪ ಮೀಡಿಯಾ ಹೌಸ್ | ಢಾಕಾ |
ಬಾಂಗ್ಲಾದೇಶ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ದೇಶ ತೊರೆದ ಬೆನ್ನಲ್ಲೇ ಅಲ್ಲಿ ಅರಾಜಕತೆ ಸೃಷ್ಠಿಯಾಗಿದ್ದು, ಪ್ರತಿಭಟನಾಕಾರರ ಹೆಸರಿನಲ್ಲಿ ಪುಂಡರು ದಾಂಧಲೆ ನಡೆಸಿದ್ದು, ಪ್ರಧಾನಿ ನಿವಾಸವನ್ನು ಅಕ್ಷರಶಃ ಭೂತಯ್ಯನ ಮಗ ಅಯ್ಯು ಚಿತ್ರದ ದೃಶ್ಯದಂತೆ ದೋಚಿದ್ದಾರೆ.
ಶೇಖ್ ಹಸೀನಾ #Sheik Hasina ನಿವಾಸಕ್ಕೆ ನುಗ್ಗಿನ ಪುಂಡರು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿದ್ದಾರೆ. ಇವರುಗಳ ದಾಳಿ ಗಾನಾಭವನ ತತ್ತರಿಸಿ ಹೋಗಿದ್ದು, ಸ್ಮಶಾನದಂತಾಗಿದೆ.
ಶೇಖ್ ಹಸೀನಾ ಕೊಠಡಿಗೆ ನುಗ್ಗಿ ಅವರ ಸೀರೆ, ಬ್ಲೌಸ್ ಮಾತ್ರವಲ್ಲ ಒಳ ಉಡುಪುಗಳನ್ನೂ ಸಹ ದೋಚಿರುವ ಪುಂಡರು, ಅಲ್ಲಿದ್ದ ಯಾವ ವಸ್ತುಗಳನ್ನು ಬಿಡದೇ ಹೊತ್ತೊಯ್ದಿದ್ದಾರೆ.
Also read: ನಂಬಿಸಿ ಯುವತಿಗೆ ವಂಚನೆ | ರಾಜಕೀಯ ಪಕ್ಷದ ಕಾರ್ಯಕರ್ತ ಶರತ್ ಕಲ್ಯಾಣಿ ಬಂಧನ
ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳಉಡುಪನ್ನೂ ಕದ್ದು, ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಸೋಫಾ, ಅಡುಗೆಮನೆಯಿಂದ ಹಸಿ ಮೀನು, ಕೋಳಿ, ಬಾತುಕೋಳಿ ಕದ್ದು, ಅಲ್ಲಿದ್ದ ಊಟ ಮಾಡಿ, ಶೇಖ್ ಹಸೀನಾ ಅವರ ಬೆಡ್ ರೂಂ ನಲ್ಲಿ ಮಲಗಿ ಮಜಾ ಮಾಡಿದ್ದಾರೆ.
ಜನರು ಶೇಖ್ ಹಸೀನಾ ಅವರ ಕುಟುಂಬದ ಪೂರ್ವಜರ ಮನೆಯಾಗಿ ಪರಿವರ್ತನೆಗೊಂಡ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿದ್ದಾರೆ.
ಇಷ್ಟು ಮಾತ್ರವಲ್ಲ ಅಲ್ಲಿನ ಮುಖ್ಯ ನ್ಯಾಯಾಧೀಶರ ಮನೆ ಮತ್ತು ರಾಜಧಾನಿಯಾದ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ಬಂಗಲೆಯ ಮೇಲೂ ದಾಳಿ ನಡೆಸಿ, ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post