ಕಲ್ಪ ಮೀಡಿಯಾ ಹೌಸ್ | ಢಾಕಾ |
45 ನಿಮಿಷ ನಿಮಗೆ ಸಮಯ… ಅಷ್ಟರೊಳಗಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕುಟುಂಬ ಸಹಿತ ದೇಶ ಬಿಡಬೇಕು… ಇಲ್ಲದಿದ್ದರೆ… ಹೀಗೆ ಎಚ್ಚರಿಸಿ ಬಾಂಗ್ಲಾದೇಶದ ಪ್ರಧಾನಿಯನ್ನೇ ದೇಶ ಬಿಟ್ಟು ಓಡಿಸಲಾಗಿದೆ.
ಹೌದು… ಬಾಂಗ್ಲಾದೇಶದ ಸೇನಾ ಮುಖ್ಯಸ್ಥ, ವಾಕರ್-ಉಜ್-ಝಮಾನ್ #Wakar-uz-zamaan ಎಂಬಾತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹೆದರಿಸಿ ಓಡಿಸಿದ್ದಾನೆ.
ಪ್ರಧಾನಿ ಶೇಖ್ ಹಸೀನಾ #PM Sheikh Haseena ಅವರು ರಾಜೀನಾಮೆ ನೀಡಿ ದೇಶ ತೊರೆದ ನಂತರ ಢಾಕಾ ನಗರ ಅಕ್ಷರಶಃ ಹೊತ್ತಿ ಉರಿಯುತ್ತಿದ್ದು, ಅರಾಜಕತೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
Also read: ಯಶಸ್ಸಿಗೆ ಆತ್ಮವಿಶ್ವಾಸ ಬಹಳ ಮುಖ್ಯ: ಚಂದನ್ ರಾವ್ ಅಭಿಪ್ರಾಯ
ಯಾರು ಈ ಝಮಾನ್?
ಬಾಂಗ್ಲಾದೇಶದ ಸೇನಾ ಮುಖ್ಯಸ್ಥನಾಗಿರುವ ವಾಕರ್-ಉಜ್-ಝಮಾನ್ ಬೇರಾರು ಅಲ್ಲ… ಸ್ವತಃ ಶೇಖ್ ಹಸೀನಾ ಅವರ ಹತ್ತಿರದ ಸಂಬಂಧಿಯಾಗಿದ್ದಾನೆ. ಹೀಗಿದ್ದು, ಅವರನ್ನೇ ದೇಶ ಬಿಟ್ಟು ಓಡಿಸುವ ವಿಕೃತಿ ಹಾಗೂ ಸರ್ವಾಧಿಕಾರತ್ವವನ್ನು ಆತ ಮೆರೆದಿದ್ದಾನೆ.
ಸುಮಾರು 30 ವರ್ಷಗಳ ವೃತ್ತಿಜೀವನದಲ್ಲಿ, ಝಮಾನ್ ಅವರು ಶೇಖ್ ಹಸೀನಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾನೆ. ಪ್ರಧಾನ ಮಂತ್ರಿ ಕಚೇರಿಯ ಅಡಿಯಲ್ಲಿ ಸಶಸ್ತ್ರ ಪಡೆಗಳ ವಿಭಾಗದಲ್ಲಿ ಪ್ರಧಾನ ಸಿಬ್ಬಂದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾನೆ.
ಶೇಖ್ ಹಸೀನಾ ಅವರನ್ನು ಹೆಚ್ಚು ನಂಬಿದ್ದರಿಂದ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದರು. ಆದರೆ, ಅವರ ನಂಬಿಕೆಗೆ ಈತ ದ್ರೋಹ ಮಾಡಿ, ಈಗ ದೇಶವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post