ಕಲ್ಪ ಮೀಡಿಯಾ ಹೌಸ್ | ಚಿತ್ರ ವಿಮರ್ಷೆ |
ಚಲನಚಿತ್ರವೆಂಬ ಸಾರಿಗೊ ಅಥವಾ ಸಾಂಬಾರಿಗೋ, ಕಮರ್ಷಿಯಲ್ ಟಚ್ ಎಂಬ ಇಂಗನ್ನು ರುಚಿಗಾಗಿ, ರುಚಿಯೂ ಕೆಡದಂತೆ, ತಿಂದ ಮೇಲೂ ರುಚಿ ಉಳಿವಂತೆ ಉಣ ಬಡಿಸಿದ್ದು ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಕಲಾತ್ಮಕತೆಗೆ ಹಿಡಿದ ಕನ್ನಡಿಯಂತಿದೆ.
ವಿವಿಧ ದಿಕ್ಕಿನೆಡೆಗೆ ಸಾಗುವ ಹಲವು ಕಥೆಗಳನ್ನು ಒಂದೆಡೆ ಸೇರಿಸುವ ಪರಿ ಸಾಮಾನ್ಯವೇ ಆದರೂ ಅವುಗಳ ಪಯಣದಲ್ಲಿ ನಿರ್ದೇಶಕರು ಕಟ್ಟಿಕೊಡುವ ನೈಜತೆಗೆ ಹತ್ತಿರವಾದ ಘಟನೆಗಳು ಮತ್ತು ಅದ ಹೆಣೆದ ಬಗೆ ಭಾವನಾತ್ಮಕವೂ, ತರ್ಕಬದ್ಧವೂ, ಹಾಸ್ಯಮಯವೂ ಆಗಿದೆ. ಎಲ್ಲರಿಗೂ ಆಯಾ ಪಾತ್ರಗಳು ಸ್ವಭಾವತಃ ಒಪ್ಪುವಂತಿತ್ತು. ತನ್ನೆಲ್ಲ ಚಟಗಳಿಗೆ ತಂದೆ ತಾಯಿಯರಿಗಿದ್ದ ತನ್ನ ಪಾಲನೆಯ ನಿರ್ಲಕ್ಷವನ್ನೇ ದೂಷಿಸುವ, ಡ್ರಗ್ಸ್ ಬಿಡಲಾಗದೆ, ಜೀವನಕ್ಕೆ ಹೊಂದಿಕೊಳ್ಳಲಾಗದೆ ಖಿನ್ನತೆಗೆ ಜಾರುವ ಪಾತ್ರ ಐಶಾನಿ ಶೆಟ್ಟಿ ಅವರಿಗೆ, ಅವರೇ ಪಾತ್ರವೇನೋ ಎನ್ನುವಷ್ಟರ ಮಟ್ಟಿಗೆ ಒಪ್ಪಿದೆ. ಸಿದ್ದು ಮೂಲಿ ಮನಿಯವರ ಪ್ಯಾರಾಚೂಟ್ ಪಾತ್ರ ವ್ಯಸನದ ಕಿಕ್ಕನ್ನು ಅನುಭವಿಸುವ ಆ ಅನುಭೋಗದ ನಟನೆ ಗಮನಾರ್ಹ. ಹಾಸ್ಯ ದೃಶ್ಯಗಳನ್ನು ವಿನಾಕಾರಣ ಪೋಣಿಸದೇ, ಕಥೆಯಾಗಿಯೇ ಬಳಸಿಕೊಂಡದ್ದು ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಹರಿಯಲು ಬಿಡದು.


ದೊಡ್ಡ ಹೊಂಡದಲ್ಲಿ ಬಿದ್ದಿದ್ದ ಎಲ್ಲಾ ಪಾತ್ರಗಳು ಸುಕ್ಷೇಮವಾಗಿ ಪಾರಾಗಿ, ಗುಂಡಿಯಿಂದ ಅದೆಷ್ಟೋ ದೂರದಲ್ಲಿದ್ದ ವ್ಯಕ್ತಿ ಬಿದ್ದು ಪಾರಾಗದೆ ಹೋದದ್ದು ಕಾಕತಾಳಿಯವೋ ಅಥವಾ ಆ ವ್ಯಕ್ತಿ ಬಿದ್ದರೂ ಎದ್ದರೂ ಸಾಂಬಾರಿನ ರುಚಿಗೇನು ಆಗದು ಎಂಬ ನಿರ್ದೇಶಕರ ತೀಕ್ಷ್ಣತೆಯೋ? ಅದ ತಿಳಿಯಲು ನೀವು ಚಲನಚಿತ್ರವ ನೋಡಲೇಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post