No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Thursday, October 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಂಜುನಾಥನ ಸನ್ನಿಧಿಯಲ್ಲಿ ರುದ್ರ ಪಾರಾಯಣದ ನಾದದಿ ಕರಗಿದ ಚಿಂತೆಗಳು, ಬೆಸೆದ ಮನಸ್ಸುಗಳು!

kalpa News by kalpa News
October 15, 2026
in Special Articles
0
Dharmasthala Temple Rudra Parayana Unites Hearts
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |M Adithya Prasad copy

(Shivamogga) ಶಿವಮೊಗ್ಗದಿಂದ 33 ಜನರ ತಂಡವಾಗಿ ಧರ್ಮಸ್ಥಳ (Dharmasthala) ಕ್ಷೇತ್ರದತ್ತ ಹೊರಟ ಆ ಪ್ರಯಾಣ, ಕೇವಲ ಒಂದು ಪ್ರವಾಸವಾಗಿರಲಿಲ್ಲ. ಅದು ನಮ್ಮೊಳಗಿನ ನಮ್ಮನ್ನೇ ಹುಡುಕಿಕೊಳ್ಳುವ ಒಂದು ಸುಂದರ ಆಧ್ಯಾತ್ಮಿಕ ಪಯಣವಾಗಿತ್ತು.

ದಿನನಿತ್ಯದ ಬದುಕಿನಲ್ಲಿ ಕೆಲಸ, ಜವಾಬ್ದಾರಿ, ಸಂಬಂಧಗಳು, ಒತ್ತಡಗಳು, ಆತುರ! ಇವೆಲ್ಲದರ ನಡುವೆ ನಮ್ಮ ಮನಸ್ಸಿಗೆ ತನ್ನೊಂದಿಗೆ ತಾನೇ ಮಾತನಾಡಿಕೊಳ್ಳಲು ಸಮಯವೇ ಸಿಗುವುದಿಲ್ಲ. ಅಂತಹ ಒಂದು ಸನ್ನಿವೇಶವನ್ನ ರೂಪಿಸಿಕೊಟ್ಟಿದ್ದು ಶಿವಮೊಗ್ಗದ ಬಿಂಬ ಮಂಜಣ್ಣ. ಅವರೊಂದಿಗೆ ಯಾತ್ರೆಗೆ ಮೂಲ ಕಾರಣರಾದ ಟಿ.ಕೆ. ಮಹಾಬಲೇಶ್ವರಭಟ್ಟರು.

ಇಲ್ಲಿ ಬಿಂಬ ಎಂಬ ಹೆಸರನ್ನ ಯಾಕೆ ಬಳಸಿದೆನೆಂದರೆ, ನಾನು ಕಂಡಂತೆ ನಮ್ಮ ತಂಡದಲ್ಲಿ ನಾಲ್ಕಾರು ಮಂದಿ ಛಾಯಾಗ್ರಾಹಕರೇ ಇದ್ದುದು ವಿಶೇಷವೆನಿಸಿತ್ತು. ಬಹುಷಃ ಈ ಛಾಯಾಗ್ರಾಹಕನಾದವಿಗೆ ತಾನು ಒಂದು ಉತ್ತಮ ಚಿತ್ರ ಸೆರೆಹಿಡಿಯಲು ಬೇಕಾದ ತಾಳ್ಮೆಯೇ ತನ್ನೊಳಗೆ ತಾನು ಮುಂದುವರಿದು ಆಧ್ಯಾತ್ಮಿಕ ಚಿಂತನೆಗಳನ್ನ ಮೂಡಿಸಿಕೊಳ್ಳುವಲ್ಲಿ ತನ್ನ ಅರಿವಿಲ್ಲದೇ ಕೆಲಸ ಮಾಡುತ್ತಿದೆಯೇನೋ ಎಂದು ಅನಿಸಿದ್ದು ಸುಳ್ಳಲ್ಲ. ಏಕೆಂದರೆ ನನ್ನನ್ನೂ ಸೇರಿದಂತೆ ಸೀತಾರಾಮ ರಾಯರು, ಬಿಂಬ ಸ್ಟುಡಿಯೋದ ಮಂಜುನಾಥ ಕೂದುವಳ್ಳಿ ಹಾಗೇ ನಟೇಶ್ ಇವರೆಲ್ಲರೂ ಛಾಯಾಗ್ರಹಣಕ್ಕೆ ಸಂಬಂಧಿಸಿಕ ಕಾರ್‍ಯದಲ್ಲಿ ತೊಡಗಿಸಿಕೊಂಡು ಬಂದವರೇ ಆಗಿರುವುದು ಗಮನಿಸಬೇಕಾದ ಅಂಶವಾಗಿದೆ.

ಹೀಗೆಯೇ ನನ್ನ ಈ ಆಧ್ಯಾತ್ಮ ಚಿಂತನೆಯ ವೇಗವು ಮಂಜುನಾಥ ಸ್ವಾಮಿಯ ಸನ್ನಿಧಿಗೆ ತಲುಪಿದ ಕ್ಷಣದಿಂದಲೇ ನಿಧಾನವಾಗತೊಡಗಿತು. ಹೊರಗಿನ ಗದ್ದಲದ ನಡುವೆ ಒಳಗೊಂದು ನಿಶ್ಶಬ್ದತೆ ಮೂಡಿತು.

ಎರಡು ದಿನಗಳ ಕಾಲ ನಡೆದ ರುದ್ರ ಪಾರಾಯಣ ಈ ಯಾತ್ರೆಯ ಪ್ರಮುಖ ಅನುಭವವಾಗಿತ್ತು. ಒಟ್ಟಾಗಿ ಕುಳಿತು, ಒಂದೇ ಸ್ವರದಲ್ಲಿ ರುದ್ರಮಂತ್ರಗಳನ್ನು ಪಠಿಸುವಾಗ, ಅದು ಕೇವಲ ಮಂತ್ರೋಚ್ಚಾರಣೆಯಾಗಿರಲಿಲ್ಲ. ಪ್ರತಿಯೊಂದು ಶಬ್ದವೂ ಮನಸ್ಸಿನೊಳಗೆ ಇಳಿಯುತ್ತಿರುವ ಅನುಭವ. ರುದ್ರನಾಮದ ಸ್ಪಂದನದೊಂದಿಗೆ ಮನಸ್ಸಿನಲ್ಲಿದ್ದ ಅನೇಕ ಚಿಂತೆಗಳು, ಗೊಂದಲಗಳು, ಅಶಾಂತಿಗಳು ನಿಧಾನವಾಗಿ ಕರಗುತ್ತಿರುವಂತೆ ಭಾಸವಾಯಿತು.Shivamogga Dasara 2026

ಮಂತ್ರದ ಶಕ್ತಿ ಎಂದರೆ ಕೇವಲ ಅದರ ಉಚ್ಚಾರಣೆಯಲ್ಲ; ಅದನ್ನು ಶ್ರದ್ಧೆಯಿಂದ ಸ್ವೀಕರಿಸುವ ಮನಸ್ಸಿನಲ್ಲಿಯೂ ಇದೆ. ರುದ್ರ ಪಾರಾಯಣದ ಆ ಎರಡು ದಿನಗಳು ನಮ್ಮೆಲ್ಲರಿಗೂ ಒಂದು ರೀತಿಯ ಮಾನಸಿಕ ಶುದ್ಧೀಕರಣದ ಅನುಭವವನ್ನು ನೀಡಿತು. ಇಲ್ಲಿ ವಿಶೇಷವೆಂದರೆ, ಪರಿಚಯವಿಲ್ಲದವರು! ಪರಿಚಿತರಾದುದು ಈ ಯಾತ್ರೆಯ ಮತ್ತೊಂದು ವಿಶೇಷತೆ.

ಪ್ರಯಾಣ ಆರಂಭಿಸಿದಾಗ ನಮ್ಮೊಂದಿಗೆ ಇದ್ದ 33 ಜನರಲ್ಲಿ ಕೆಲವರು ಪರಸ್ಪರ ಅಪರಿಚಿತರಾಗಿದ್ದರು. ಆದರೆ ಎರಡು ದಿನಗಳ ಒಡನಾಟ, ಪೂಜೆ, ಪಾರಾಯಣ, ಊಟ, ಮಾತುಕತೆ ಮತ್ತು ಅನುಭವಗಳು ನಮ್ಮನ್ನು ಹತ್ತಿರ ತಂದವು. ಒಟ್ಟಿಗೆ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡಾಗ, ಪರಿಚಯಗಳು ಸಂಬಂಧಗಳಾಗಿ ಬದಲಾಗುತ್ತವೆ.

Also Read>> ಎಂಜಿ ಐಎಸ್‌ಎಲ್‌ಗೆ ಭರ್ಜರಿ ಆರಂಭ: ಮೊದಲ ವಾರದಲ್ಲೇ ಯೂಟ್ಯೂಬ್‌ನಲ್ಲಿ 6.5 ಕೋಟಿ ವೀಕ್ಷಣೆ!

ಒಬ್ಬರ ನೋವು ಮತ್ತೊಬ್ಬರಿಗೆ ಅರ್ಥವಾಗುತ್ತದೆ. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠವಾಗುತ್ತದೆ. ಹೀಗೆ ಒಂದು ಸಣ್ಣ ಯಾತ್ರೆಯಿಂದ ಮನಸ್ಸುಗಳನ್ನು ಬೆಸೆಯುವ ಒಂದು ಸುಂದರ ಅವಕಾಶಕ್ಕೆ ದಾರಿಯಾಯಿತು.

ಪವಿತ್ರ ವಾತಾವರಣದಲ್ಲಿ ನಿಂತಾಗ ಸಹಜವಾಗಿಯೇ ಒಂದು ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ?

“ನಮ್ಮ ದೈನಂದಿನ ಬದುಕಿನಲ್ಲಿ ನಾವು ಎಲ್ಲಿ ತಪ್ಪುತ್ತಿದ್ದೇವೆ?”

ನಾವು ಮಾತನಾಡುವ ಮಾತುಗಳಲ್ಲಿ ಎಷ್ಟು ಸತ್ಯವಿದೆ?

ನಮ್ಮ ನಡೆ-ನುಡಿಯಲ್ಲಿ ಎಷ್ಟು ಪ್ರಾಮಾಣಿಕತೆ ಇದೆ?

ನಮ್ಮಿಂದ ಮತ್ತೊಬ್ಬರಿಗೆ ನೋವಾಗುತ್ತಿದೆಯೇ?

ನಮ್ಮ ಕರ್ತವ್ಯಗಳನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆಯೇ?

ನಮಗೆ ಸಿಕ್ಕಿರುವ ಸಮಯವನ್ನು ನಾವು ಹೇಗೆ ಬಳಸುತ್ತಿದ್ದೇವೆ?

ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಲು ದೇವರು ನಮ್ಮ ಮುಂದೆ ಬಂದು ನಿಲ್ಲಬೇಕಿಲ್ಲ. ದೇವರ ಸನ್ನಿಧಿ ನಮ್ಮೊಳಗಿನ ಪ್ರಶ್ನೆಗಳನ್ನು ನಮಗೆ ಕೇಳಿಸುವಂತೆ ಮಾಡುತ್ತದೆ. ಅದೇ ಆಧ್ಯಾತ್ಮಿಕತೆಯ ಮೊದಲ ಹೆಜ್ಜೆ ಎಂದು ನನ್ನ ಭಾವನೆ.Shivamogga Dasara 2026

ಆಧ್ಯಾತ್ಮಿಕತೆ ಎಂದರೆ ಬದುಕಿನಿಂದ ದೂರವಾಗುವುದಲ್ಲ. ಅಥವಾ ದೇವಸ್ಥಾನಕ್ಕೆ ಹೋಗುವುದೋ, ಪೂಜೆ ಮಾಡುವುದೋ ಅಥವಾ ಮಂತ್ರ ಪಠಿಸುವುದಷ್ಟೇ ಅಲ್ಲ. ಅದು ನಮ್ಮ ಬದುಕನ್ನು ಒಳಗಿನಿಂದ ಸುಂದರಗೊಳಿಸುವ ಒಂದು ಪ್ರಯತ್ನ. ಪೂಜೆ ನಮ್ಮಲ್ಲಿ ಶ್ರದ್ಧೆಯನ್ನು ಬೆಳೆಸುತ್ತದೆ. ಪಾರಾಯಣ ಮನಸ್ಸಿಗೆ ಏಕಾಗ್ರತೆಯನ್ನು ನೀಡುತ್ತದೆ. ಧ್ಯಾನ ಆತ್ಮಾವಲೋಕನವನ್ನು ಕಲಿಸುತ್ತದೆ. ದಾನ ನಮ್ಮಲ್ಲಿ ಸಹಾನುಭೂತಿಯನ್ನು ಬೆಳೆಸುತ್ತದೆ. ಹೀಗೆ ಸಂಸ್ಕಾರವು ನಮ್ಮ ನಡವಳಿಕೆಗೆ ಮಿತಿಯನ್ನು ನೀಡುತ್ತದೆ. ಹೀಗಾಗಿ ಆಧ್ಯಾತ್ಮಿಕತೆಯ ನಿಜವಾದ ಫಲ ದೇವಾಲಯದಿಂದ ಹೊರಬಂದ ನಂತರವೇ ಕಾಣಬೇಕು.

ಹೊರಗೆ ಬಂದ ನಂತರ ಆ ಬದಲಾವಣೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಆಧ್ಯಾತ್ಮಿಕತೆ ಎನಿಸುತ್ತದೆ. ನಮ್ಮ ದೇವಸ್ಥಾನಗಳು ಕೇವಲ ಪೂಜೆಯ ಸ್ಥಳಗಳಲ್ಲ. ಅವು ನಮ್ಮ ಇತಿಹಾಸ, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಜೀವಂತ ಪಾಠಶಾಲೆಗಳು. ನಮ್ಮ ಪೂರ್ವಜರು ನಿರ್ಮಿಸಿದ ಕ್ಷೇತ್ರಗಳ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಎಂದರೆ ಕೇವಲ ಇತಿಹಾಸ ತಿಳಿದುಕೊಳ್ಳುವುದಲ್ಲ; ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ಅರಿತುಕೊಳ್ಳುವುದು.

ಹಾಗೆಯೇ ನಮ್ಮ ಮುಂದಿನ ಪೀಳಿಗೆಗೆ ಈ ಪರಂಪರೆಯನ್ನ ಪರಿಚಯಿಸುವ ಜವಾಬ್ದಾರಿಯೂ ನಮ್ಮದೇ ಆಗಿದೆ. ಏಕೆಂದರೆ ತನ್ನ ಬೇರುಗಳನ್ನು ತಿಳಿದ ಮನುಷ್ಯನಿಗೆ ಅವನ ಭವಿಷ್ಯದ ದಾರಿ ಹೆಚ್ಚು ಸ್ಪಷ್ಟವಾಗಿ ತಿಳಿದಿರುತ್ತದೆ ಎಂಬುದು ಚಿಂತಕರು ಕಂಡುಕೊಂಡ ಸತ್ಯ. ಇಲ್ಲಿ ನಮ್ಮ ಪೂರ್ವಜರು ರೂಪಿಸಿದ ಅನೇಕ ಪೂಜೆ-ಪುನಸ್ಕಾರಗಳ ಹಿಂದೆ ಆಳವಾದ ಜೀವನದರ್ಶನವಿದೆ.

ಒಂದು ನಿರ್ದಿಷ್ಟ ಸಮಯದಲ್ಲಿ ಎದ್ದು, ದೇಹ-ಮನಸ್ಸನ್ನು ಶುದ್ಧಗೊಳಿಸಿ, ದೇವರನ್ನು ಸ್ಮರಿಸಿ, ಮಂತ್ರ ಪಠಿಸಿ, ಕೆಲಕಾಲ ಮೌನವಾಗಿ ಕುಳಿತುಕೊಳ್ಳುವುದು! ಇವೆಲ್ಲವೂ ಮನಸ್ಸಿಗೆ ಒಂದು ಶಿಸ್ತು ನೀಡುತ್ತವೆ. ದಿನನಿತ್ಯದ ಬದುಕಿನಲ್ಲಿ ಇಂತಹ ಆಚರಣೆಗಳು ಏಕಾಗ್ರತೆ, ಶಾಂತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗೆ ನೆರವಾಗುತ್ತವೆ. ಇದರಲ್ಲಿಯೇ ನಮ್ಮ ಸಂಸ್ಕೃತಿಯ ವಿಶೇಷತೆ ಇದೆ.Shivamogga Dasara 2026

ನಾವು ಮಾಡುವ ಆಚರಣೆ ಹೊರಗಿನಿಂದ ಕಾಣುತ್ತದೆ; ಅದರ ಪರಿಣಾಮ ಒಳಗಿನಿಂದ ನಮ್ಮ ಅನುಭವಕ್ಕೆ ಬರುತ್ತದೆ ಎಂಬುದರಲ್ಲಿ ಬೇರೆ ಮಾತಿಲ್ಲ. ಮರಳಿ ಬಂದದ್ದು 33 ಜನರಲ್ಲ? ಬದಲಾಗಿರುವ 33 ಮನಸ್ಸುಗಳು ಎಂಬುದರಲ್ಲಿ ಸಂಶಯವಿಲ್ಲ.

Dharmasthala : ಹೊರಟಾಗ ಯಾತ್ರಿಕರು-ಮರಳುವಾಗ ಸ್ನೇಹಿತರು

ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಹೊರಟಾಗ ನಾವು ಕೇವಲ ಯಾತ್ರಿಕರಾಗಿದ್ದೆವು. ಆದರೆ ಮಂಜುನಾಥನ ಸನ್ನಿಧಿಯಲ್ಲಿ ಎರಡು ದಿನಗಳನ್ನು ಕಳೆದ ನಂತರ, ನಾವು ನಮ್ಮನ್ನೇ ಸ್ವಲ್ಪ ಹೆಚ್ಚು ಅರಿತುಕೊಂಡು ಮರಳಿದ್ದೇವೆ. ಹೊಸ ಪರಿಚಯಗಳು ಸಿಕ್ಕವು. ಹೊಸ ಸ್ನೇಹಗಳು ಬೆಳೆದವು. ಮುಖ್ಯವಾಗಿ, ನಮ್ಮ ಬದುಕಿನ ಬಗ್ಗೆ ನಾವು ಮತ್ತೊಮ್ಮೆ ಚಿಂತಿಸುವ ಅವಕಾಶ ದೊರೆಯಿತು. ಧರ್ಮಸ್ಥಳದ ಪವಿತ್ರ ವಾತಾವರಣ ನಮ್ಮಲ್ಲಿ ಒಂದು ಮಾತನ್ನು ಮೌನವಾಗಿ ಹೇಳಿದಂತಾಯಿತು?

“ದೇವರನ್ನು ಹುಡುಕುತ್ತಾ ಕ್ಷೇತ್ರಕ್ಕೆ ಬರುವುದಕ್ಕಿಂತ, ದೇವರು ತೋರಿಸಿದ ದಾರಿಯಲ್ಲಿ ಬದುಕನ್ನು ರೂಪಿಸಿಕೊಂಡು ಮನೆಗೆ ಮರಳುವುದು ಮುಖ್ಯ.” ಯಾತ್ರೆ ಮುಗಿದರೂ ಅದರ ಅನುಭವ ಮುಗಿಯಬಾರದು. ದರ್ಶನ ಮುಗಿದರೂ ಅವನು ಕಲಿಸಿದ ಧರ್ಮ, ಶಿಸ್ತು, ಸತ್ಯ ಮತ್ತು ಮಾನವೀಯತೆ ನಮ್ಮ ಬದುಕಿನಲ್ಲಿ ಮುಂದುವರಿಯಬೇಕು. ಅದೇ ಯಾತ್ರೆಯ ನಿಜವಾದ ಪ್ರಸಾದ.

ಶಿವಮೊಗ್ಗದಿಂದ ಧರ್ಮಸ್ಥಳದವರೆಗೆ ಸಾಗಿದ ಈ ಪಯಣ, ಕೊನೆಗೆ ನಮ್ಮೊಳಗೇ ಬಂದು ನಿಂತಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsChrist King

PES ShivamoggaKalpa News Advertising Disclaimer

Tags: DharmastalaShivamoggaಆಧ್ಯಾತ್ಮಿಕ ಪಯಣಧರ್ಮಸ್ಥಳಯಾತ್ರೆಶಿವಮೊಗ್ಗ
Share199Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಎಂಜಿ ಐಎಸ್‌ಎಲ್‌ಗೆ ಭರ್ಜರಿ ಆರಂಭ: ಮೊದಲ ವಾರದಲ್ಲೇ ಯೂಟ್ಯೂಬ್‌ನಲ್ಲಿ 6.5 ಕೋಟಿ ವೀಕ್ಷಣೆ!

Next Post

ಚಿಕ್ಕಮಗಳೂರು | ಏಕಾಏಕಿ ಬೆಂಕಿ: 2 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮ

kalpa News

kalpa News

Next Post
chikkamagaluru two electric scooters catch fire

ಚಿಕ್ಕಮಗಳೂರು | ಏಕಾಏಕಿ ಬೆಂಕಿ: 2 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮ

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL