ಕಲ್ಪ ಮೀಡಿಯಾ ಹೌಸ್
ಧಾರವಾಡ: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ತಮ್ಮ ಹುಟ್ಟುಹಬ್ಬದ ನಿಮಿತ್ಯ ಇಂದು ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣನ ಸ್ಮಾರಕಕ್ಕೆ ಭೇಟಿ ನೀಡಿ, ನೆಚ್ಚಿನ ಆರಾಧ್ಯ ದೈವದ ಸನ್ನಿಧಿಯಲ್ಲಿ ಜನ್ಮದಿನ ಆಚರಿಸಿಕೊಂಡರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿ ಅಪ್ರತಿಮ ವೀರನಾಗಿದ್ದ ಸಂಗೊಳ್ಳಿ ರಾಯಣ್ಣ ಶೌರ್ಯ, ನಿಷ್ಠೆ, ದೇಶಪ್ರೇಮ ಎಂದೆಂದಿಗೂ ಆದರ್ಶವಾದುದು. ಈ ಮಹಾನ್ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಅನೇಕ ಬಾರಿ ನನಗೆ ದೊರೆತಿದ್ದು ಪುಣ್ಯ. ಧಾರವಾಡ ತೊರೆದು ಬೆಂಗಳೂರು ಸೇರಿದ ಬಳಿಕ ಬಹುತೇಕ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿದ್ದೇನೆ. ಈ ಬಾರಿ ವಿಶೇಷ ಭಕ್ತಿ ಮತ್ತು ಶ್ರದ್ಧೆಯಿಂದ ನಂದಗಡಕ್ಕೆ ಬಂದಿದ್ದೇನೆ ಎಂದು ಹೇಳಿದರು.
ರಾಯಣ್ಣ ಮತ್ತು ಆತನೊಂದಿಗೆ ಆರು ಜನರನ್ನು ಗಲ್ಲಿಗೇರಿಸಿದ ಸ್ಥಳ ಹಾಗೂ ಸಮಾಧಿ ಸ್ಥಳಗಳ ದರ್ಶನ ಪಡೆದಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಚಲನಚಿತ್ರ ಅಕಾಡೆಮಿಯ ಚಟುವಟಿಕೆಗಳನ್ನು ವಿಸ್ತರಿಸಲು ಉತ್ಸುಕನಾಗಿದ್ದೇನೆ ಎಂದು ಸುನೀಲ್ ಪುರಾಣಿಕ ತಿಳಿಸಿದರು. ಖಾನಾಪುರದ ರಾಜಕೀಯ ಪಕ್ಷದ ಮುಖಂಡರು, ಸ್ನೇಹಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post