ಕಲ್ಪ ಮೀಡಿಯಾ ಹೌಸ್ | ಧಾರವಾಡ |
ನವಲಗುಂದ ಪುರಸಭೆಗೆ ವಿವಿಧ ರೀತಿಯ ತೆರಿಗೆ ಪಾವತಿಸಲು ಭಾರತ್ ಬಿಲ್ ಪಾವತಿ Online Bill Payment ವ್ಯವಸ್ಥೆ ಮಾಡಲಾಗಿದೆ.
ಈ ಕುರಿತಂತೆ ನವಲಗುಂದ ಪುರಸಭೆ ಪ್ರಕಟಣೆ ಹೊರಡಿಸಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ಕರ, ಮಳಿಗೆ ಬಾಡಿಗೆ, ಜಾಹೀರಾತು ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ, ಹಾಗೂ ಇನ್ನಿತರೆ ಪುರಸಭೆಗೆ ಭರಣಾ ಮಾಡುವಂತಹ ಯಾವುದೇ ತರಹದ ತೆರಿಗೆಗಳನ್ನು ಪಾವತಿಸಲು ಸಾರ್ವಜನಿಕರಿಗೆ ಭಾರತ ಬಿಲ್ ಪಾವತಿ ವ್ಯವಸ್ಥೆಯನ್ನು ಈಗಾಗಲೇ ಇರುವ ಸ್ವೀಕೃತಿ ತಂತ್ರಾಂಶದಲ್ಲಿ ಸೆಪ್ಟೆಂಬರ್ 13 ರಿಂದ ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ಫೋನ ಪೇ, ಪೇಟಿಎಂ, ಗೂಗಲ್ ಪೇ, ಬ್ಯಾಂಕ್ ಪಾವತಿಗಳು ಮತ್ತು ಇನ್ನಿತರ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್’ಗಳನ್ನು ಉಪಯೋಗಿಸಿ ತೆರಿಗೆಗಳನ್ನು ಪಾವತಿಸಿ ತಮ್ಮ ಸೇವೆಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08380-229247 ಸಂಪರ್ಕಿಸಬಹುದು ಎಂದು ತಿಳಿಸಿದೆ.
Also read: ಡೋಪಿಂಗ್ ಟೆಸ್ಟ್’ನಲ್ಲಿ ಫೇಲ್: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post