ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಹುಬ್ಬಳ್ಳಿಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಮಾನವೀಯ ದೃಷ್ಟಿಯಿಂದ ಹಾಗೂ ಕರ್ಮಚಾರಿ ಕಲ್ಯಾಣ ದೃಷ್ಟಿಯಿಂದ ಪುನ: ಕೆಲಸಕ್ಕೆ ಸೇರಿಸಿಕೊಳ್ಳುವಂತೆ ವರದಿಯನ್ನು ಫೆ.13ರೊಳಗಾಗಿ ಹೈಕೋರ್ಟ್‍ಗೆ ಸಲ್ಲಿಸಲಾಗುವುದೆಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ತಿಳಿಸಿದರು.
ರೈಲ್ವೆ ಸ್ವಚ್ಛತಾ ಕಾರ್ಮಿಕರ ಕುಂದುಕೊರತೆ ಆಲಿಸಿ ವರದಿ ನೀಡುವಂತೆ ಆಯೋಗಕ್ಕೆ ರಾಜ್ಯ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಹಾಗೂ ರೈಲ್ವೆ ಅಧಿಕಾರಿ ಆಸಿಫ್ ಆಫೀಜ್ ಜೊತೆಯಲ್ಲಿ ಈ ಕುರಿತು ಸಭೆ ನಡೆಸಲಾಯಿತು.

Also read: ಶೀಘ್ರದಲ್ಲೇ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಪ್ರಕಟ: ಡಿ.ಕೆ. ಶಿವಕುಮಾರ್
ಗುತ್ತಿಗೆದಾರನು 92 ಕಾರ್ಮಿಕರ ಪೈಕಿ ಕೇವಲ 54 ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಂಡಿದ್ದು, ಉಳಿದ ಕಾರ್ಮಿಕರ ಕುಟುಂಬ ಸ್ಥಿತಿಗತಿ ದಯನೀಯವಾಗಿದ್ದು, ಉಳಿದವರನ್ನು ಸಹ ಸೇರಿಸಿಕೊಳ್ಳುವ ಬಗ್ಗೆ ಫೆ.13 ರೊಳಗಾಗಿ ಹೈಕೋರ್ಟ್‍ಗೆ ವರದಿ ನೀಡಲಾಗುವುದೆಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣ ಕೋಟಿ ಸಭೆಯಲ್ಲಿ ತಿಳಿಸಿದರು.

ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕುರಿತು 12 ಜನ ಪೌರ ಕಾರ್ಮಿಕರ ವೈಯಕ್ತಿಕ ದೂರು ಪ್ರಕರಣಗಳ ಬಗ್ಗೆ ಸಭೆ ನಡೆಯಿತು.
ಕೆಲ ಕಾರ್ಮಿಕರಿಗೆ ಪಿಎಫ್, ಇಎಸ್‍ಐ ಕನಿಷ್ಟ ವೇತನ, ಕೆಲಸದಿಂದ ತೆಗೆದುಹಾಕಿರುವ ಕುರಿತು ಚರ್ಚಿಸಲಾಯಿತು. ಮಹಾನಗರಪಾಲಿಕೆ ಜಂಟಿ ಆಯುಕ್ತರಾದ ಶಂಕರಾನಂದ ಬನಶಂಕರಿ ಹಾಗೂ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.










Discussion about this post