ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು ಧಾರವಾಡ, ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಶರಣರ ಮೌಲ್ಯಗಳ ಪ್ರಸ್ತುತತೆ ‘ ಕುರಿತು ಒಂದು ದಿನದ ವಿಚಾರ ಸಂಕಿರಣ ಜೆ.ಎಸ್.ಎಸ್. ಡಿ.ಆರ್.ಎಚ್. ಸಭಾಭವನದಲ್ಲಿ ಜರುಗಿತು.
ಜ್ಯೋತಿ ಬೆಳಗಿಸಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಅವರು ಕನ್ನಡ ಮಾಧ್ಯಮದಲ್ಲಿ ಮಾತ್ರ ಬದುಕನ್ನು ಸಹಜವಾಗಿ ಅರಳಿಸಿಕೊಳ್ಳಬಹುದು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಅಂತರಂಗದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ .ಇದು ಗೊತ್ತಿದ್ದರೂ ನಾವೆಲ್ಲ ಇಂಗ್ಲೀಷ್ ನ ಬೆನ್ನು ಹತ್ತಿ ಹೊರಟಿದ್ದೇವೆ ಇದು ವಿಷಾಧನೀಯ. ಶೈಕ್ಷಣಿಕ ನಿಯಮಾವಳಿಗಳನ್ನು ರೂಪಿಸುವವರು ಇದನ್ನು ಗಮನಿಸಬೇಕೆಂದು ಹಿತ ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಧ್ಯಾಪಕರ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಡಾ. ಮಹಾದೇವಿ ಹಿರೇಮಠ ಅವರು ಕನ್ನಡ ಕನ್ನಡ ಅಧ್ಯಾಪಕರ ಸಮಸ್ಯೆ ಸವಾಲು ಮತ್ತು ಆಡಳಿತಗಳನ್ನು ಹೇಳಿ ಅವುಗಳ ಬಗ್ಗೆ ಚರ್ಚೆ ಸಾಕಷ್ಟು ಚರ್ಚೆಗಳು ನಡೆಯಬೇಕು ಎಂದರು.

Also read: ಅಧಿಕಾರಿಗಳ ದಾಳಿ | ಪರವಾನಗಿ ಇಲ್ಲದೇ ಸಂಗ್ರಹಿಸಿದ್ದ 7.6 ಲಕ್ಷ ಮೌಲ್ಯದ ಪಟಾಕಿ ವಶ
ಅಧ್ಯಕ್ಷತೆಯನ್ನು ಕನ್ನಡ ಮೌಲ್ಯಮಾಪನ ಕೇಂದ್ರದ ಚೇರಮನ್ನರು, ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರಭು ಗಂಜಿಹಾಳ್ ವಹಿಸಿದ್ದರು.

ವರದಿ : ಡಾ. ಪ್ರಭು ಗಂಜಿಹಾಳ, ಮೊ: 9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post