ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಯಾವುದೇ ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಲಾಂಛನ ಹಾಗೂ ಚಿನ್ಹೆಗಳನ್ನು ಬರೆಸುವಂತಿಲ್ಲ. ಹಾಗೇನಾದರೂ ಬರೆಸಿದ್ದರೆ ಮುಂದಿನ ಒಂದು ವಾರದ ಒಳಗಾಗಿ ಅದನ್ನು ತೆರವುಗೊಳಿಸಬೇಕು ಎಂದು ಸಾರಿಗೆ ಇಲಾಖೆ ಗಡುವು ನೀಡಿದೆ.
ಈ ಕುರಿತಂತೆ ವಾಹನ ಸವಾರರಿಗೆ ಸೂಚನೆ ನೀಡಿರುವ ಸಾರಿಗೆ ಇಲಾಖೆ, ಯಾವುದೇ ವಾಹನಗಳ ನಂಬರ್ ಪ್ಲೇಟ್ ಮೇಲೆ ನೋಂದಣಿ ಸಂಖ್ಯೆ ಹೊರತಾಗಿ ಯಾವುದೇ ರೀತಿಯ ಹೆಸರು, ಲಾಂಛನ, ಚಿನ್ಹೆ ಸೇರಿದಂತೆ ಏನನ್ನೂ ಬರೆಸುವಂತಿಲ್ಲ. ಒಂದು ವೇಳೆ ಯಾವುದೇ ವಾಹನಗಳ ಮಾಲೀಕರ ಬರೆಸಿದ್ದಲ್ಲಿ ಮುಂದಿನ ಒಂದು ವಾರದ ಒಳಗಾಗಿ ಅದನ್ನು ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ ಎಂದಿದೆ.
Get in Touch With Us info@kalpa.news Whatsapp: 9481252093
















