ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-20 |

ಉದಾಹರಣೆಗೆ: ವಿದ್ಯಾಭ್ಯಾಸದ ಪಠ್ಯಕ್ರಮವನ್ನು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾಡುತ್ತಾರೆಯೇ ಹೊರತು ಅವರ ಕಲಿಕೆಯ ಗ್ರಹಿಕೆಗಲ್ಲ. (ಇಂದಿನ ದಿನಗಳಲ್ಲಿ ಭಾರತವೂ ಇದಕ್ಕೆ ಹೊರತಾಗಿಲ್ಲ) ಇದರಿಂದ ಎಲ್ಲ ಮಕ್ಕಳೂ ಎಲ್ಲವನ್ನೂ ಕಲಿಯಲೇ ಬೇಕಾಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಒಂದು ತರಗತಿಯಲ್ಲಿ 20 ಮಕ್ಕಳಿದ್ದರೆ, ಪ್ರತಿಯೊಂದು ಮಗುವಿಗೂ ಅದರದೇ ಆದ ಅಭಿರುಚಿ, ಕಲಿಕಾ ವೇಗ, ಗ್ರಹಿಕೆಯ ಸಾಮರ್ಥ್ಯವಿರುತ್ತದೆ. ಆದರೆ ಆ ರೀತಿ ಕಲಿಕೆಯ ಅನುಗುಣವಾಗಿ ಕಲಿಸಲು ಶಾಲೆಗಳಲ್ಲಿ ಬೇಕಾಗುವಂತಹ ಉಪಕರಣ, ಸಮಯ ಹಾಗೂ ಬೋಧಕರು ಇರುವುದಿಲ್ಲ.
ಕಲಿಕೆಯ ಉದ್ದೇಶವೇ ಜ್ಞಾನಾರ್ಜನೆ ಆಗಿರುವಾಗ, ಬರೀ ಮೇಲ್ನೋಟಕ್ಕೆ ಉತ್ತಮವಾಗಿ ಕಂಡುಬಂದು, ಆಳವಾದ ಚಿಂತನೆ ಹಾಗೂ ಜ್ಞಾನ ಇಲ್ಲವಾದರೆ ಏನು ಪ್ರಯೋಜನ? ಏಕರೂಪತೆ ಪ್ರಕೃತಿಯ ನಿಯಮವಲ್ಲ ಎನ್ನುವ ಮೂಲ ತತ್ವ ಇಲ್ಲಿ ಮರೆತಂತಾಗಿದೆ.
ಏಕಾತ್ಮತೆಯೆಂದರೆ ಮನುಷ್ಯನ ಅವಶ್ಯಕತೆ ಮೇರೆಗೆ ವಿವೇಚನೆ, ಬುದ್ಧಿ, ಅಂತಃಕರಣ ಹಾಗೂ ವ್ಯವಹಾರ ಜ್ಞಾನದಿಂದ ಕೊಡುವ ಪರಿಹಾರ/ಪರಿಷ್ಕಾರ. ಏಕರೂಪತೆ ಎಂದರೆ ಅವಶ್ಯಕತೆ, ಸಾಮರ್ಥ್ಯವನ್ನು ಗಮನಿಸದೇ ಎಲ್ಲರಿಗೂ ಸಾಮಾನ್ಯ ನಿಯಮವನ್ನು ಅನ್ವಯ ಮಾಡುವುದು.
ಏಕಾತ್ಮತೆಯನ್ನು ಉದಾಹರಣೆ ಸಹಿತವಾಗಿ ನಾವು ಗಮನಿಸುವುದಾದರೆ,ಹೇಗೆ ಪ್ರತಿಯೊಂದು ಜಾತಿಯ ಗಿಡಕ್ಕೆ , ಬೇರೆ ಬೇರೆ ಪ್ರಮಾಣದಲ್ಲಿ ಗೊಬ್ಬರ ನೀಡುತ್ತೇವೆಯೋ ಹಾಗೆ ಜನರಿಗೆ ಏನು ಬೇಕೋ ಅದನ್ನು ಎಷ್ಟು ಬೇಕೆಂಬ ನಿರ್ಣಯ ಮಾಡಿ ನೀಡಬೇಕಾಗುತ್ತದೆ.ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಮಗೆ ಇದರ ಅರ್ಥವಾಗುವುದು.
ನಾವು ಹಾಕುವ ಬಟ್ಟೆಗಳನ್ನು ನಮ್ಮ ಮೈಮಾಟಕ್ಕೆ ಅನುಗುಣವಾಗಿ ದರ್ಜಿಗೆ ಬಟ್ಟೆ ಕೊಟ್ಟು ಹೊಲಿಸಿದರೆ ಅದು ಸರಿಯಾಗಿ ಒಪ್ಪುತ್ತದೆ. ಅದೇ ನಾವು ಸಿದ್ಧ ಉಡುಪುಗಳನ್ನು ಕೊಂಡರೆ, ಆ ಬಟ್ಟೆ ನಮ್ಮ ಮೈಮಾಟಕ್ಕೆ ಒಗ್ಗದಿರಬಹುದು. ನಾವು ಚುನಾಯಿಸುವ ವ್ಯಕ್ತಿಗಳನ್ನು ಬರಿ ಮತದ ಆಧಾರವಲ್ಲದೆ ಅವರಿಗೆ ಮತ ನೀಡಿದ ಮತದಾರನ ಗುಣ, ಬುದ್ಧಿ, ಜ್ಞಾನದ ಆಧಾರದ ಮೇಲೆ ಚುನಾಯಿಸಿದಲ್ಲಿ ಒಳ್ಳೆಯ ಪ್ರಜಾ ಪ್ರತಿನಿಧಿ ದೊರೆಯುವ ಅವಕಾಶವಿದೆ.
ಈ ಯಾಂತ್ರಿಕ ಏಕರೂಪತೆಯಿಂದ, ಏಕಾತ್ಮತೆ ಸ್ವಾಭಾವಿಕತೆಗೆ ಹೋಗುವ ದಾರಿ ದೂರದ್ದು ಆದರೆ ಸಣ್ಣ ಪರಿವರ್ತನೆಗಳ ಹೆಜ್ಜೆಯ ಮೂಲಕ ಸಾಧಿಸಬಹುದು.

ಈ ರೀತಿ ನಿರ್ಮಿತವಾದ ಸಮಾಜದಲ್ಲಿ, ಮೇಲ್ನೋಟಕ್ಕೆ ಕಂಡುಬರುವ ಅಸಮಾನತೆಗಳಿಗೆ ಮಹತ್ವವಿರುವುದಿಲ್ಲ. ಊರಿಗೆ ತಕ್ಕ ಸೌಲಭ್ಯ , ಊರಿನ ಪರಿಸರಕ್ಕೆ ಬೇಕಾದಂತ ಉದ್ಯಮಕ್ಕೆ ಮನ್ನಣೆ, ಕೆಲಸದ ಮನ್ನಣೆಗೆ ತಕ್ಕಂತಹ ಸಂಭಾವನೆ ಹಾಗೂ ಗುಣಮಾನ್ಯವಾದ ಮೌಲ್ಯಮಾಪನಗಳ ಮೇರೆಗೆ ಸಮೃದ್ಧ ಸಮಾಜವನ್ನು ಭಾರತದಲ್ಲಿ ನಿರ್ಮಿಸಬಹುದು. ವಿಭಿನ್ನತೆಗೆ ಮನ್ನಣೆ ಹಾಗೂ ಭಾರತಕ್ಕೆ ಸರಿಹೊಂದುವ ಸ್ವಾಭಾವಿಕವಾದ ಏಕಾತ್ಮತೆ ರೂಢಿಸಿಕೊಳ್ಳಬಹುದು.
ನಮ್ಮ ಜೀವನದಲ್ಲಿ ಏಕಾತ್ಮತೆಯನ್ನು ಒಪ್ಪಿಕೊಂಡು ಆ ರೀತಿಯ ವ್ಯವಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಏಕಾತ್ಮತೆ ಸ್ವಾಭಾವಿಕವಾದುದು ಎಂಬುದನ್ನು ಸಮಾಜಕ್ಕೆ ನಾವು ಮನವರಿಕೆ ಮಾಡಿಸಬಹುದಾಗಿದೆ. ವಿಭಿನ್ನತೆ ಸೃಷ್ಟಿಯ ನಿಯಮ ಅದನ್ನು ಮಾನವನು ತನ್ನ ಏಕರೂಪತೆಯ ಸೂತ್ರದಲ್ಲಿ ಕಟ್ಟಿ ಹಾಕಲಾರ. ಒಂದು ವೇಳೆ ಕಟ್ಟಿ ಹಾಕಿದರೂ ಅದು ಸೃಷ್ಟಿಗೆ ವಿರುದ್ಧವಾದ ಪ್ರವೃತ್ತಿಯಾಗುವುದೇ ವಿನ: ಏಕರೂಪತೆ ಎಂದೂ ಏಕಾತ್ಮತೆಯಾಗದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post