ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ವೈರಸ್ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಉದ್ದೇಶದಿಂದ ಜೆಟ್ಟಿಂಗ್ ಯಂತ್ರ ಮೂಲಕ ಸೋಡಿಯಂ ಹೈಪೋ ಕ್ಲೋರೈಡ್ (ಸೋಂಕು ನಿವಾರಕ ದ್ರಾವಣ) ಸಿಂಪಡಣೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬನಶಂಕರಿ 3 ನೇ ಹಂತದ ಹೊಸಕೆರೆಹಳ್ಳಿಯ ಗುರುದತ್ತ ಬಡಾವಣೆಯಲ್ಲಿ ಇತ್ತೀಚೆಗೆ ಸಿಂಪಡಿಸಲಾಯಿತ್ತು.
ಗುರುದತ್ತ ಬಡಾವಣೆಯ ಶ್ರೀ ಶಕ್ತಿ ಗಣಪತಿ ದೇವಾಲಯದ ಮುಂಭಾಗದಲ್ಲಿ ಆರಂಭ ಮಾಡಿ ಗುರುದತ್ತ ಬಡಾವಣೆಯಲ್ಲಿ ಸಂಪೂರ್ಣ ವಾಗಿ ಬಿಬಿಎಂಪಿಯ ರವಿ ಅವರ ನೇತೃತ್ವದಲ್ಲಿ ವಿಜಯ್ ಕುಮಾರ್ ರವರು ಸೋಂಕು ನಿವಾರಣಾ ದ್ರಾವಣವನ್ನು ಸಿಂಪಡಿಸಿದರು.
ಸರ್ಕಾರ ರಾಜ್ಯದಾದ್ಯಂತ ಲೌಕ್ ಡೌನ್’ಗೆ ಆದೇಶಿಸಿದ್ದು ಸಾರ್ವಜನಿಕರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಲಾಗಿದೆ. ಹೀಗಾಗಿ, ಇದು ದ್ರಾವಣ ಸಿಂಪಡಣೆ ಮಾಡಲು ಸೂಕ್ತ ಸಮಯವೆನಿಸಿದೆ.
ಮುಂದಿನ ದಿನಗಳಲ್ಲಿ 198 ವಾರ್ಡ್ ಗಳಲ್ಲೂ ಸ್ವಚ್ಛತಾ ಕಾರ್ಯದ ಜತೆಗೆ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಲಾಗುವುದು. ಸೋಂಕು ನಿವಾರಣಾ ದ್ರಾವಣದಿಂದ ವೈರಾಣುಗಳು ಸಾಯುತ್ತವೆ ಎಂಬುದು ರುಜುವಾತಾಗಿಲ್ಲ, ಆದರೆ ಸೊಳ್ಳೆಗಳು ನಾಶವಾಗುತ್ತವೆ.
ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಪ್ಪಿಸಬಹುದಾಗಿದೆ ಎನ್ನುತ್ತಾರೆ ಆರ್’ಆರ್ ನಗರ ವಾರ್ಡ್ ನ ಪಾಲಿಕೆಯ (ಬಿಬಿಎಂಪಿಯ) ರವಿ.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
Get in Touch With Us info@kalpa.news Whatsapp: 9481252093
Discussion about this post