ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಳ್ಳೇಕೆರೆ ಹಾಲ್ಟ್ – ದೇವನೂರು ಹಾಗೂ ಕಡೂರು – ಬೀರೂರು ಭಾಗಗಳ ನಡುವೆ ಸುರಕ್ಷತಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಿವಿಧ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಿದೆ.
Also Read: ಪೊಲೀಸ್ ಪಬ್ಲಿಕ್ ಶಾಲೆ | ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಈ ರೈಲುಗಳ ನಿಯಂತ್ರಣ
ವಾಸ್ಕೋ-ಡ-ಗಾಮಾ – ಯಶವಂತಪುರ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 17310) ಏಪ್ರಿಲ್ 7 ರಿಂದ 14ರವರೆಗೆ ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಣಗೊಳ್ಳಲಿದೆ.
ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ (ರೈಲು ಸಂಖ್ಯೆ 20652) ಏಪ್ರಿಲ್ 8 ರಿಂದ 15ರವರೆಗೆ ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಣಕ್ಕೆ (ವಿಳಂಬ) ಒಳಗಾಗಲಿವೆ.
ಈ ರೈಲು ಭಾಗಶಃ ರದ್ದತಿ
ಹುಬ್ಬಳ್ಳಿ – ಅರಸೀಕೆರೆ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16214) ಏಪ್ರಿಲ್ 17 ರಿಂದ 20ರವರೆಗೆ ಬೀರೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಬೀರೂರಿನಲ್ಲೇ ಸಂಚಾರ ಮುಕ್ತಾಯಗೊಳಿಸಲಿದೆ.
ಅದೇ ರೀತಿ, ಅರಸೀಕೆರೆ – ಹುಬ್ಬಳ್ಳಿ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 16213) ಏಪ್ರಿಲ್ 18 ರಿಂದ 21ರವರೆಗೆ ಅರಸೀಕೆರೆ ಮತ್ತು ಬೀರೂರು ನಡುವೆ ರದ್ದಾಗಲಿದೆ. ಈ ರೈಲು ಅರಸೀಕೆರೆ ಬದಲಿಗೆ ಬೀರೂರು ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















