ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚನ್ನಸಂದ್ರ ನಿಲ್ದಾಣದಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಕೆಲವು ರೈಲುಗಳ ಸಂಚಾರ ರದ್ದು, ಭಾಗಷಃ ರದ್ದು, ಮಾರ್ಗ ಬದಲಾವಣೆ ಹಾಗೂ ನಿಯಂತ್ರಣಗೊಳ್ಳಲಿದ್ದು ವಿವರಗಳು ಹೀಗಿವೆ.
ಈ ರೈಲುಗಳ ರದ್ದತಿ
- 66591 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಕೋಲಾರ ಮೆಮು, 66593 ಸಂಖ್ಯೆಯ ಕೋಲಾರ – ಬಂಗಾರಪೇಟೆ ಮೆಮು, 66594 ಸಂಖ್ಯೆಯ ಬಂಗಾರಪೇಟೆ – ಕೋಲಾರ ಮೆಮು ಮತ್ತು 66592 ಸಂಖ್ಯೆಯ ಕೋಲಾರ – ಬೆಂಗಳೂರು ಕಂಪಾರ್ಟ್ಮೆಂಟ್ ಮೆಮು ಸೇವೆಗಳನ್ನು ದಿನಾಂಕ 29.04.2026 ರಿಂದ 02.05.2026 ರವರೆಗೆ ರದ್ದುಗೊಳಿಸಲಾಗುವುದು.
- 06539 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಬೀದರ್ ಎಕ್ಸ್’ಪ್ರೆಸ್ ವಿಶೇಷ ರೈಲನ್ನು ದಿನಾಂಕ 01.05.2026 ರಂದು ರದ್ದುಗೊಳಿಸಲಾಗುವುದು.
- 06540 ಸಂಖ್ಯೆಯ ಬೀದರ್ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ವಿಶೇಷ ಸೇವೆಯನ್ನು ದಿನಾಂಕ 02.05.2026 ರಂದು ರದ್ದುಗೊಳಿಸಲಾಗುವುದು.
Also Read: ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ
ಈ ರೈಲುಗಳ ಭಾಗಶಃ ರದ್ದತಿ
- ದಿನಾಂಕ 29.04.2026 ರಿಂದ 02.05.2026 ರವರೆಗೆ ಹೊರಡುವ 11301 ಸಂಖ್ಯೆಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಯಲಹಂಕ ಮತ್ತು ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
- ದಿನಾಂಕ 30.04.2026 ರಿಂದ 02.05.2026 ರವರೆಗೆ ಹೊರಡುವ 11302 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಕೆಎಸ್’ಆರ್ ಬೆಂಗಳೂರು – ಯಲಹಂಕ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಕೆಎಸ್’ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ಯಲಹಂಕ ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡುವುದು.
- ದಿನಾಂಕ 29.04.2026 ರಿಂದ 01.05.2026 ರವರೆಗೆ ಹೊರಡುವ ರೈಲು ಸಂಖ್ಯೆ 20687 ಎಸ್’ಎಸ್’ಎಸ್ ಹುಬ್ಬಳ್ಳಿ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಯಶವಂತಪುರ ಮತ್ತು ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

- ದಿನಾಂಕ 30.04.2026 ರಿಂದ 02.05.2026 ರವರೆಗೆ ಹೊರಡುವ ರೈಲು ಸಂಖ್ಯೆ 20688 ಕೆಎಸ್’ಆರ್ ಬೆಂಗಳೂರು – ಎಸ್’ಎಸ್’ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಕೆಎಸ್’ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ರೈಲು ಕೆಎಸ್’ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ಯಶವಂತಪುರ ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯದಲ್ಲಿ ಹೊರಡಲಿದೆ.
- ದಿನಾಂಕ 30.04.2026 ಮತ್ತು 01.05.2026 ರಂದು ಹೊರಡುವ ರೈಲು ಸಂಖ್ಯೆ 18463 ಭುವನೇಶ್ವರ – ಕೆಎಸ್’ಆರ್ ಬೆಂಗಳೂರು ಪ್ರಶಾಂತಿ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಯಲಹಂಕ ಮತ್ತು ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
- ದಿನಾಂಕ 01.05.2026 ಮತ್ತು 02.05.2026 ರಂದು ಹೊರಡುವ ರೈಲು ಸಂಖ್ಯೆ 18464 ಕೆಎಸ್’ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಕೆಎಸ್’ಆರ್ ಬೆಂಗಳೂರು – ಯಲಹಂಕ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಕೆಎಸ್’ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ಯಲಹಂಕ ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡುವುದು.
Also Read: ತಿರುಚ್ಚಿರಾಪಳ್ಳಿ-ಬೆಂಗಳೂರು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್
ಈ ರೈಲುಗಳ ಮಾರ್ಗ ಬದಲಾವಣೆ
- ದಿನಾಂಕ 15.04.2026 ರಿಂದ 02.05.2026 ರವರೆಗೆ ಹೊರಡುವ 16593 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಹಜೂರ್ ಸಾಹಿಬ್ ನಾಂದೇಡ್ ಎಕ್ಸ್’ಪ್ರೆಸ್ ಕೆಎಸ್’ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು ಬೆಂಗಳೂರು ಕಂಪಾರ್ಟ್ಮೆಂಟ್ ನಿಲ್ದಾಣದ ನಿಲುಗಡೆ ಇರುವುದಿಲ್ಲ.
- ದಿನಾಂಕ 19.04.2026 ಮತ್ತು 26.04.2026ರಂದು ಹೊರಡುವ 12647 ಸಂಖ್ಯೆಯ ಕೊಯಮತ್ತೂರು – ಹಜರತ್ ನಿಜಾಮುದ್ದೀನ್ ಎಕ್ಸ್’ಪ್ರೆಸ್ ಕೃಷ್ಣರಾಜಪುರಂ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಯಶವಂತಪುರ, ಯಲಹಂಕ ಮತ್ತು ಧರ್ಮಾವರಂ ನಿಲ್ದಾಣಗಳ ಮೂಲಕ ಸಂಚರಿಸುವುದು.

- ದಿನಾಂಕ 29.04.2026 ರಿಂದ 02.05.2026 ರವರೆಗೆ ಹೊರಡುವ 12785 ಸಂಖ್ಯೆಯ ಕಾಚಿಗುಡ – ಅಶೋಕಪುರಂ ಎಕ್ಸ್’ಪ್ರೆಸ್ ಯಲಹಂಕ, ಯಶವಂತಪುರ ಮತ್ತು ಕೆಎಸ್’ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಪಾರ್ಟ್ಮೆಂಟ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
- ದಿನಾಂಕ 30.04.2026 ರಿಂದ 02.05.2026 ರವರೆಗೆ ಹೊರಡುವ 12786 ಸಂಖ್ಯೆಯ ಅಶೋಕಪುರಂ – ಕಾಚಿಗುಡ ಎಕ್ಸ್’ಪ್ರೆಸ್ ಕೆಎಸ್’ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು ಬೆಂಗಳೂರು ಕಂಪಾರ್ಟ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
ಈ ರೈಲಿನ ಸಮಯ ಬದಲಾವಣೆ
- ದಿನಾಂಕ 15.04.2026 ರಿಂದ 02.05.2026 ರವರೆಗೆ ಹೊರಡುವ 16593 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಹಜೂರ್ ಸಾಹಿಬ್ ನಾಂದೇಡ್ ಎಕ್ಸ್’ಪ್ರೆಸ್ ರೈಲು ಕೆಎಸ್’ಆರ್ ಬೆಂಗಳೂರು ನಿಲ್ದಾಣದಿಂದ 75 ನಿಮಿಷ ತಡವಾಗಿ ಹೊರಡಲಿದೆ.
ಈ ರೈಲುಗಳ ನಿಯಂತ್ರಣ
- ದಿನಾಂಕ 12.04.2026 ರಂದು ಹೊರಡುವ 11301 ಸಂಖ್ಯೆಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 12.04.2026 ಮತ್ತು 15.04.2026 ರಿಂದ 30.04.2026 ರವರೆಗೆ ರಂದು ಹೊರಡುವ 16594 ಸಂಖ್ಯೆಯ ಹಜೂರ್ ಸಾಹಿಬ್ ನಾಂದೇಡ್ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 13.04.2026 ರಂದು ಹೊರಡುವ 11301 ಸಂಖ್ಯೆಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 80 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

- ದಿನಾಂಕ 13.04.2026 ರಂದು ಹೊರಡುವ 06540 ಸಂಖ್ಯೆಯ ಬೀದರ್ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ವಿಶೇಷ ರೈಲನ್ನು ಮಾರ್ಗಮಧ್ಯೆ 210 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 13.04.2026 ಮತ್ತು 14.04.2026 ರಂದು ಹೊರಡುವ 16594 ಸಂಖ್ಯೆಯ ಹಜೂರ್ ಸಾಹಿಬ್ ನಾಂದೇಡ್ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 150 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 17.04.2026 ಮತ್ತು 24.04.2026 ರಂದು ಹೊರಡುವ 22602 ಸಂಖ್ಯೆಯ ಸಾಯಿನಗರ ಶಿರಡಿ – ಪುರಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು
- ದಿನಾಂಕ 18.04.2026, 20.04.2026, 25.04.2026 ಮತ್ತು 27.04.2026 ರಂದು ಹೊರಡುವ 06540 ಸಂಖ್ಯೆಯ ಬೀದರ್ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ವಿಶೇಷ ರೈಲನ್ನು ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 01.05.2026 ರಂದು ಹೊರಡುವ 11086 ಸಂಖ್ಯೆಯ ಗ್ವಾಲಿಯರ್ – ಎಸ್’ಎಂವಿಟಿ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 01.05.2026ರಂದು ಹೊರಡುವ 22602 ಸಂಖ್ಯೆಯ ಸಾಯಿನಗರ ಶಿರಡಿ – ಪುರಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೆÊ ಸೆಂಟ್ರಲ್ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 270 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- ದಿನಾಂಕ 01.05.2026 ಮತ್ತು 02.05.2026ರಂದು ಹೊರಡುವ 16594 ಸಂಖ್ಯೆಯ ಹಜೂರ್ ಸಾಹಿಬ್ ನಾಂದೇಡ್ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 240 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















