ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದ ವಕೀಲರ ಸಂಘ ಮತ್ತು ಹಿಂದೂ ಮಹಾಸಭಾ ಸಂಯುಕ್ತಾಶ್ರಯದಲ್ಲಿ ನಗರದ ವಿವಿದೆಡೆ ಮಾಸ್ಕ್‌ಗಳನ್ನು ಮತ್ತು ಅನ್ನದ ಪೊಟ್ಟಣಗಳನ್ನು ವಿತರಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಮಾಸ್ಕ್‌ಗಳನ್ನು ವಿತರಿಸಿ ಭಯಾನಕ ಕೊರೊನಾ ರೋಗ ತಡೆಗಟ್ಟಲು ಸಾರ್ವಜನಿಕರು ಆಡಳಿತದೊಂದಿಗೆ ಸಹಕರಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ನಗರದ ಹೊಸಮನೆ, ನೆಹರು ನಗರ, ಗೌಳಿಗರ ಬೀದಿ, ಬಿಎಚ್ ರಸ್ತೆ, ತರೀಕೆರೆ ರಸ್ತೆ, ಹುತ್ತಾಕಾಲೋನಿ ಮುಂತಾದ ಬಡಾವಣೆಗಳಲ್ಲಿ ನಿರ್ಗತಿಕರನ್ನು ಪತ್ತೆಹಚ್ಚಿ ಅನ್ನದ ಪೊಟ್ಟಣಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ಜೆ. ಮೋಹನ್, ರಂಗಪ್ಪ, ಹಾಗೂ ಹಿಂದೂ ಮಹಾಸಭಾದ ಮುಖಂಡರಾದ ಕೆ. ಮಂಜುನಾಥ, ಗಿರೀಶ್, ಮಧನ್, ಶಂಭು, ಅರುಣ, ಕಲ್ಲೇಶ್, ಪ್ರಕಾಶ್, ನಾಗೇಶ್ ತೇಲ್ಕರ್ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post