ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಶಿಕಾರಿಪುರ |
ಜಿಲ್ಲಾ ಪಂಚಾಯತ್’ನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆಯಲ್ಲಿ ಶಿಕಾರಿಪುರದ #Shikaripura ಕುಮದ್ವತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಪ್ರಧಾನಮಂತ್ರಿಯಾಗಿ #PrimeMinister ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಯುವ ಅಣಕು ಸಂಸತ್ 2024-25 ಸ್ಪರ್ಧೆಯನ್ನು ಅಬ್ದುಲ್ ನಜೀರ್ ಸಾಬ್ ಸಭಾಂಗಣ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಶಿಕಾರಿಪುರದ ಕುಮದ್ವತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಪ್ರಧಾನಮಂತ್ರಿಯಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಇದೇ ಕಾಲೇಜಿನ ಎಚ್. ಶ್ರೇಯಾ ಅವರು ಸಾರಿಗೆ ಸಚಿವರಾಗಿ ಪಾಲ್ಗೊಂಡಿದ್ದರು.

ಈ ಯುವ ಅಣುಕು ಸಂಸತ್’ನಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, #BYRaghavendra ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಸಂಸತ್ತಿನ ಕಾರ್ಯವೈಕರಿಯನ್ನು ಪ್ರಾಯೋಗಿಕವಾಗಿ ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ಯುವ ಪೀಳಿಗೆಯ ಪಾತ್ರ ಮತ್ತು ಜವಾಬ್ದಾರಿಯನ್ನು ಹೇಳುತ್ತಾ ಆಗಮಿಸಿದ್ದ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಕನ್ನಡ ಪ್ರಾರೋಪಣ ಸಂಸದೀಯ ಮತ್ತು ಶಾಸನ ರಚನಾ ಇಲಾಖೆಯ ಅಪರ ನಿರ್ದೇಶಕ ವಿಜಯ್ ಕುಮಾರ್, ಜಿಲ್ಲಾ ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಎಸ್. ಚಂದ್ರಪ್ಪ, ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ. ನಾಗರಾಜ ಬಾಬು, ಎಸ್. ಪಂಡರಿನಾಥ, ಎಸ್. ಯೋಗೇಶ್, ಎಸ್.ವಿ. ಗುರುರಾಜ್, ಶಶಿಕುಮಾರ್, ಕೆ. ಪ್ರಸನ್ನ, ಆರ್.ಸಿ. ಘನಶ್ಯಾಮ್, ಮಂಜುನಾಥ ಬಣಕರ್ ಇದ್ದರು.
ಪಿಇಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಪ್ರಿಯಾ ಹಾಗೂ ಶಾಂಭವಿ ನಿರೂಪಿಸಿ, ಎಂ. ಯೋಗೇಶ್ ಸ್ವಾಗತಿಸಿದರು. ಉಪನ್ಯಾಸಕ ಗಣೇಶ್ ನಾಗ್ ವಂದನಾರ್ಪಣೆ ನಡೆಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post