ಕನಕಪುರ: ಈಗಾಗಲೇ ಹಲವು ಬಾರಿ ಐಟಿ ಅಧಿಕಾರಿಗಳಿಗೆ ಒಳಗಾಗಿ ತತ್ತರಿಸಿರುವ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಕನಕಪುರ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕಂದಾಯ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಸುಮಾರು 5 ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿದ್ದು, ಇದು ಮುಕ್ತಾಯವಾಗುವವರೆಗೂ ಯಾವುದೇ ಸಾರ್ವಜನಿಕರಿಗೂ ಸಹ ಕಚೇರಿ ಒಳಗಡೆ ಪ್ರವೇಶವನ್ನು ನಿರಾಕರಿಸಲಾಗಿದೆ.

















