No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಶಿಕಾರಿಪುರ

ಶಿಕಾರಿಪುರಕ್ಕೆ ಹೋದರೆ ಯಡಿಯೂರಪ್ಪ ಅವರ ಕನಸಿನ ಈ ಸ್ಥಳ ನೋಡದೇ ಬರಬೇಡಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 18, 2018
in ಶಿಕಾರಿಪುರ
0
Share on FacebookShare on TwitterShare on WhatsApp

ಶಿಕಾರಿಪುರ: ಹೌದು… ಅದೊಂದು ಅದ್ಬುತ ಲೋಕ. ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸೊಂದು ನನಸಾದ ಸ್ಥಳ. ಅದನ್ನು ಇಂದು ಅವರೇ ಸ್ವತಃ ಲೋಕಾರ್ಪಣೆ ಮಾಡಿ, ಮೈದುಂಬಿರುವ ಅಂಜನಾಪುರ ಜಲಾಶಯಕ್ಕೆ ಬಾಗಿಣ ಅರ್ಪಿಸಿದ್ದಾರೆ.

ಅದು ಅಂಜನಾಪುರ ಜಲಾಶಯದ ಪ್ರದೇಶ.. ಅಲ್ಲಿ ನಿರ್ಮಾಣವಾಗಿದೆ ನೈಜತೆಗೆ ಸೆಡ್ಡುಹೊಡೆದಂತೆ ನಿರ್ಮಾಣವಾದ ಕಲಾಕೃತಿಗಳಿರುವ ಉದ್ಯಾನವನ.. ಅಲ್ಲಿ ಏನೇನು ಇದೆ ಎಂಬುದನ್ನು ಕೊನೆಯಲ್ಲಿ ಓದಿ.. ಅದಕ್ಕೂ ಮುನ್ನ ಕೊಂಚ ಹಿಂದಿನ ವಿಚಾರಗಳನ್ನು ತಿಳಿದುಕೊಳ್ಳಿ…

ಶಿಕಾರಿಪುರ ತಾಲೂಕಿನಿಂದ 17 ಕಿಮೀ ದೂರದಲ್ಲಿರುವ ಇಲ್ಲಿನ ಅಂಜನಾಪುರ ಕೆರೆಯನ್ನು ನಿರ್ಮಾಣ ಮಾಡಲಾಗಿದೆ. ಕೆರೆಗೆ ತೀರ್ಥಹಳ್ಳಿ ತಾಲೂಕಿನ ಹುಂಚ ಬಳಿಯಿರುವ ಬೆಟ್ಯಾರಣ್ಯ ಪ್ರದೇಶದಲ್ಲಿ ಉಗಮವಾಗುವ ಕುಮುದ್ವತಿ ನದಿಯ ನೀರು ಹರಿದು ಬರುತ್ತಿದೆ.

ಕುಮುದ್ವಯ ನೀರು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಮುದೇನೂರು ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಗೆ ಸೇರುತ್ತದೆ. ಅದೇನೇ ಇರಲಿ ಈಗ ಶಿಕಾರಿಪುರ ತಾಲೂಕಿಗೆ ಹೆಸರಾಗಿರುವ ಶಿಕಾರಿಪುರ ಹಾಗೂ ಶಿರಾಳಕೊಪ್ಪದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಅಂಜನಾಪುರ ಕೆರೆಗೆ ಕುಮುದ್ವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲಾಗಿದೆ.

ಈ ಕುಮುದ್ವತಿ ನದಿಗೆ ಅಡ್ಡಲಾಗಿ ಡ್ಯಾಂನ್ನು 1927 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದೊರೆಯಾಗಿದ್ದ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ರವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದರು. ನಂತರ 1936 ರಲ್ಲಿ ಪೂರ್ಣಗೊಂಡಿತು. ಇದರ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ 22.51 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಯೋಜನೆಯು ಸುಮಾರು 1.47 ಟಿಎಂಸಿ ನೀರು ಸಂಗ್ರಹಿಸಬಹುದಾದ ಸಾಮರ್ಥ್ಯ ಹೊಂದಿದೆ.
ಈ ಯೋಜನೆಯನ್ನು 10 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರಿನ ಬೆಳೆಗೆ ನೀರೊದಗಿಸಲು ನಿರ್ಮಾಣ ಮಾಡಲಾಗಿದೆ. ನಂತರ 1980 ರಲ್ಲಿ ಪುನಃ ಜಲಾಶಯದ ಸಾಮರ್ಥ್ಯ ಹೆಚ್ಚಿಸಲು ಜಲಾಶಯದ ಕೋಡಿ ಮತ್ತು ಏರಿಯನ್ನು 27.68 ಲಕ್ಷಗಳ ವೆಚ್ಚದಲ್ಲಿ ಒಂದು ಮೀಟರ್ ನಷ್ಟು ಹೆಚ್ಚಿಸಲಾಯಿತು. ಈ ರೀತಿ ಹೆಚ್ಚಿಸಿದ್ದಕ್ಕಾಗಿ ಹೆಚ್ಚುವರಿಯಾಗಿ 6,645 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲಾಯಿತು.

ಈ ಜಲಾಶಯವು ಎರಡು ನಾಲೆಗಳನ್ನು ಹೊಂದಿದ್ದು, ಬಲದಂಡೆ ನಾಲೆಯು 45 ಕಿಮೀ ಉದ್ದವಿದ್ದು, 5,919 ಹೆಕ್ಟೇರ್ (14,626 ಎಕರೆ) ಅಚ್ಚುಕಟ್ಟು ಹೊಂದಿದೆ. ಎಡ ದಂಡೆ ನಾಲೆಯು 14 ಕಿಮೀ ಉದ್ದವಿದ್ದು, 817 ಹೆಕ್ಟೇರ್ (2,019 ಎಕರೆ) ಅಚ್ಚುಕಟ್ಟು ಹೊಂದಿದೆ. ಬಲದಂಡೆ ನಾಲೆಯ ಹೊರ ಹರಿವಿನ ಪ್ರಮಾಣವು 245 ಕ್ಯೂಸೆಕ್‌ಸ್, ಎಡದಂಡೆ ನಾಲೆಯ ಹೊರ ಹರಿವಿನ ಪ್ರಮಾಣವು 50 ಕ್ಯೂಸೆಕ್‌ಸ್ ರಷ್ಟಿದೆ. ಈ ಅಂಜನಾಪುರ ಜಲಾಶಯದ ಕೋಡಿಯು ಜುಲೈ ತಿಂಗಳ 1994 ರಲ್ಲಿ ಒಡೆದ ಪರಿಣಾಮ ನೀರಿನ ಹರಿವು ಕೋಡಿಯ ಮೇಲೆ 6 ಅಡಿಗಳ ಎತ್ತರಕ್ಕಿದ್ದು, ಪ್ರಮಾಣವು 33,000 ಕ್ಯೂಸೆಕ್ ಆಗಿತ್ತು. ಆ ಸಂದರ್ಭದಲ್ಲಿ 35 ಲಕ್ಷಗಳ ವೆಚ್ಚದಲ್ಲಿ ತಾತ್ಕಾಲಿಕ ಏರಿಯನ್ನು ನಿರ್ಮಿಸಲಾಯಿತು. ನಂತರ 1997 ರಲ್ಲಿ 280 ಮೀ ಮೀ ಉದ್ದದ ಕೋಡಿಯನ್ನು ಮರು ನಿರ್ಮಾಣ ಮಾಡುವ ಉದ್ದೇಶದಿಂದ 35 ಲಕ್ಷಗಳ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಿ 1998 ರಲ್ಲಿ ಮುಕ್ತಾಯವಾಯಿತು.

ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ತತ್ತರಿಸಿ ಹೋಗಿರುವ ತಾಲೂಕಿನ ರೈತರಿಗೆ ಈಗ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿರುವುದರಿಂದ, ಅಂಜನಾಪುರ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ ಯಾಗಿ ಕೋಡಿ ಮೇಲಿಂದ ನೀರು ಹೊರ ಬರುತ್ತಿರಲು ವೀಕ್ಷಿಸಲು ಸುಂದರವಾಗಿದೆ.

ಇನ್ನು ಯಡಿಯೂರಪ್ಪರವರು ತಾವು ಮುಖ್ಯ ಮಂತ್ರಿಯಾಗಿದ್ದಾಗ ಆಸಕ್ತಿವಹಿಸಿ 2012-13 ರಲ್ಲಿ 6.5 ಎಕರೆಯ ಜಾಗದಲ್ಲಿ ಸುಮಾರು 5.25 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. 2013-14 ರಲ್ಲಿ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡು ಕಾಮಗಾರಿಯು ಆರಂಭವಾಗಿ, ಈಗ ಆ ಪಾರ್ಕ್ ಕಾಮಗಾರಿಯು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ದ್ವಾರ ಬಾಗಿಲು, ವಿದ್ಯುತ್ ಕಾಮಗಾರಿ ನಡೆಯಬೇಕಿದೆ.

ಈ ಪಾರ್ಕ್ ಇಂದು ಲೋಕಾರ್ಪಣೆಗೊಂಡಿದ್ದು, ಇಲ್ಲಿ ಸಂಪೂರ್ಣ ಗ್ರಾಮೀಣ ಸೊಗಡಿನ ಕಲಾಕೃತಿ, ಜಾನಪದ ಕಲಾಕೃತಿ, ದೇಶದ ಸ್ವಾತಂತ್ರದ ಸಂದರ್ಭದಲ್ಲಿ ಹೋರಾಟ ನಡೆಸಿ ಗಲ್ಲಿಗೇರಿದ ತಾಲೂಕಿನ ಈಸೂರಿನ ಸ್ವಾತಂತ್ರ ಹೋರಾಟಗಾರರ ಕಲಾಕೃತಿ ಸೇರಿದಂತೆ ವಿವಿಧ ರೀತಿಯ ಕಲಾಕೃತಿ ನಿರ್ಮಾಣಗೊಂಡಿದ್ದು, ಚಿಕ್ಕ ಮಕ್ಕಳಿಗೆ ಆಟಿಕೆಯ ತಾಣವೂ ಇಲ್ಲಿ ನಿರ್ಮಾಣವಾಗಿದೆ.

ಒಟ್ಟಾರೆಯಾಗಿ ಪ್ರವಾಸಿಗರಿಗೆ ಒಂದು ದಿನದ ಪ್ರವಾಸಕ್ಕೆ ಉತ್ತಮ ಪ್ರವಾಸಿ ತಾಣವಾಗಿದೆ.

-ವರದಿ ರಾಜಾರಾವ್ ಜಾಧವ್, ಶಿಕಾರಿಪುರ

Tags: Anjanapura DamB S yeddyurappaBSYShikaripuraShivamogga
Share196Tweet123Send
Previous Post

ಮಾನವೀಯತೆಯ ಪ್ರತೀಕ ಮೋದಿಯವರನ್ನು ಪ್ರಧಾನಿಯಾಗಿ ಪಡೆದ ನಾವೇ ಧನ್ಯ

Next Post

ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಗೆ ಕೋರ್ಸ್ ಸಿಬ್ಬಂದಿ ನೇಮಿಸಲು ಅಗ್ರಹ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಗೆ ಕೋರ್ಸ್ ಸಿಬ್ಬಂದಿ ನೇಮಿಸಲು ಅಗ್ರಹ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಜಾಗತಿಕ ತಾಪಮಾನ ನಿಯಂತ್ರಣ, ಭೂಮಿ ಹಸಿರು ಸಮತೋಲನಕ್ಕೆ ಆಧುನಿಕ ತಂತ್ರಜ್ಞಾನದ ಸಕ್ರಿಯ ಪಾತ್ರ ಅನಿವಾರ್ಯ

ಜಾಗತಿಕ ತಾಪಮಾನ ನಿಯಂತ್ರಣ, ಭೂಮಿ ಹಸಿರು ಸಮತೋಲನಕ್ಕೆ ಆಧುನಿಕ ತಂತ್ರಜ್ಞಾನದ ಸಕ್ರಿಯ ಪಾತ್ರ ಅನಿವಾರ್ಯ

April 10, 2026
ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

April 10, 2026
ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

April 10, 2026
ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

April 10, 2026
ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL