ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅರಣ್ಯ #Forest ಪ್ರದೇಶದಲ್ಲಿ ಯಾವುದೇ ರೀತಿಯ ಚಿತ್ರೀಕರಣ ನಡೆಸಲು ಇನ್ಮುಂದೆ ಶುಲ್ಕ ಪಾವತಿಸಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಇತ್ತೀಚಿಗೆ ಕಾಂತಾರ ಚಾಪ್ಟರ್ 1 #KGFChapter1 ಹಾಗೂ ಟಾಕ್ಸಿಕ್ #Toxic ಸಿನಿಮಾಗಳ ಶೂಟಿಂಗ್ ವೇಳೆ ಮರ ಕಡಿದ ಆರೋಪ ಹಾಗೂ ಬಾಂಬ್ ಸ್ಫೋಟ್ ಮಾಡಿದ ಹಾಗೂ ಅರಣ್ಯದಲ್ಲಿ ಬೆಂಕಿ ಹಚ್ಚಿದ ಆರೋಪ ಸಾಕಷ್ಟು ವಿವಾದ ಹುಟ್ಟಿಕೊಂಡಿತ್ತು.
Also Read>> ಫಲಪುಷ್ಪ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ | ಹೂವಿನಲ್ಲಿ ಅರಳಿರುವ ವಿಶೇಷ ಕಲಾಕೃತಿಗಳ ಫೋಟೋ ಹೀಗಿವೆ
ಹೀಗೆ ಹುಟ್ಟಿಕೊಂಡ ವಿವಾದಗಳ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಶೂಟ್ #Shooting ಮಾಡುವವರಿಗೆ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ.
ಏನಿದೆ ಆದೇಶ
ಪ್ರಸ್ತುತ ಅರಣ್ಯ ಪ್ರದೇಶದ ಚಿತ್ರೀಕರಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದ ಚಿತ್ರೀಕರಣದಿಂದಾಗಬಹುದಾದ #Shooting ತೊಂದರೆಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಪರಾಧಗಳ ಗಂಭೀರತೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಚುರಗೊಂಡಿರುವುದನ್ನು ಗಮನಿಸಲಾಗಿದೆ ಎಂದು ವರದಿಯಾಗಿದೆ.
ಯಾವೆಲ್ಲಾ ಚಿತ್ರೀಕರಣಕ್ಕೆ ಅನುಮತಿ ಕಡ್ಡಾಯ?
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ, #Movie ಧಾರಾವಾಹಿ, #Serial ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಚಿತ್ರೀಕರಿಸಲು ಶುಲ್ಕ ಪಡೆದು ಅನುಮತಿಸಲಾಗುತ್ತಿದೆ.
ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸುವ ಹಿತದೃಷ್ಟಿಯಿಂದ, ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post