ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಎಂಬ ಮಹಾ ರೋಗ ತನಗೆ ಮನಸಿಗೆ ಬಂದಂತೆ ಹರಡುತ್ತಾ ತನ್ನ ರೌದ್ರ ನರ್ತನ ಮುಂದುವರೆಸುತ್ತಾ ಹೋಗಿದೆ.
ಕೇವಲ ನಮ್ಮ ರಾಜ್ಯ, ದೇಶ ಗಳಲ್ಲದೆ ವಿದೇಶಗಳಲ್ಲೂ ತನ್ನ ವ್ಯಾಪ್ತಿಯನ್ನು ಹಬ್ಬಿಸಿಕೊಂಡಿದೆ. ನಮಗೆ ಕೆಲವು ಗೊತ್ತಿರದ ದೇಶಗಳೂ ಕೊರೋನಾ ಪರಿಣಾಮದಿಂದ ತಿಳಿಯುತ್ತಿದೆ. ಅಷ್ಟೇ ಏಕೆ ಹಳ್ಳಿಗರಿಗೆ ಅಥವಾ ಜನಸಾಮಾನ್ಯರಿಗೆ ಬೆಂಗಳೂರಿನ ಕೆಲವು areaಗಳ ಹೆಸರುಗಳೇ ಗೊತ್ತಿರಲಿಲ್ಲ ಇದರಿಂದ ಹಲವಾರು areaಗಳು ಗೊತ್ತಾಗಿವೆ.
ಇದರಿಂದ ಆದ ಅನಾಹುತ ಅಷ್ಟಿಷ್ಟಲ್ಲ!
ನಮ್ಮ ದೇಶದ ಜನ ಒಂದು ಕಡೆ ಕೂತಳ್ಳಿ ಕೂತು ಅಭ್ಯಾಸ ಕಡಿಮೆ ಯಾವನೋ MNC ಕಂಪನಿಯ ಅಡಿಯಾಳಾಗಿ ದುಡಿಯಲು ದಿನಗಟ್ಟಲೆ ಕೂತು ದಿನ ದೂಡುತ್ತಾರೆ. ಆದರೆ ಅದು ಇನ್ನೊಬ್ಬರ ಸ್ವಾರ್ಥಕ್ಕೆ ಹಿರಾತು ತಮ್ಮ ಸ್ವಾರ್ಥಕ್ಕೆ ಅಲ್ಲ.
ಲಾಕ್ ಡೌನ್ ಮಾಡಿದಿದ್ದು ಯಾವುದೋ ಸ್ವಾರ್ಥಕ್ಕೆ ಅಲ್ಲ ನಮ್ಮ ಸ್ವಾರ್ಥಕ್ಕೆ. ಅದನ್ನು ಜನರು ಮೊದಲು ಅರಿತುಕೊಂಡಿರಬೇಕು.
ನಾವು ಇಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಲು ಶುರು ಮಾಡಿದರೆ ಎಲ್ಲೋ ಯಾರೋ ಉಗುಳಿದ ಎಂಜಲು ಅಥವಾ ಇನ್ನೊಬ್ಬರ ಸ್ಪರ್ಶ ದಿಂದ ರೋಗ ತಗಲಿದರೆ ಅವರು ಅದೆಷ್ಟೋ ಜನರಿಗೆ ಮತ್ತೆ ಹಬ್ಬಬಹುದು.
ಆದರೆ ಲಾಕ್ ಡೌನ್ ಸಡಿಲಿಕೆ ಮಾಡಿ ಇಷ್ಟು ದಿನ ಮಾಡಿದ ತಪಸ್ಸು ವ್ಯರ್ಥವನ್ನು ನಾವೇ ಮಾಡಿಕೊಂಡ ಹಾಗೆ ಆಗುತ್ತದೆ.
ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ನಮ್ಮ ಸುರಕ್ಷತೆ ನಮ್ಮ ಹೊಣೆ ಹಾಗೂ ನಮ್ಮ ಕುಟುಂಬದ ಹೊಣೆ ನಾವೇ ಹೊರಬೇಕೆ ಹೊರತು ಇನ್ನಾರು ಇಲ್ಲ. ಬದಲಾಗಬೇಕು ನಾವೇ ಹೊರತು ಬದಲಾಯಿಸಲು ಯಾವುದೇ ಸರ್ಕಾರ ಬರುವುದಿಲ್ಲ. ಏನೇ ಆಗಲಿ ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸೋಣ.
Get in Touch With Us info@kalpa.news Whatsapp: 9481252093
Discussion about this post